ತುಮಕೂರು: ಉದ್ಯೋಗ ವಿನಿಮಯ ಕಚೇರಿಯು ಏಮ್ ಸ್ಕ್ತ್ರೆ್ವರ್ ಕಾಪೋರ್ರೇಷನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಯೋಗಾರ್ಥಿಗಳಿಗಾಗಿ ಡಿ.13ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಿದೆ.
ಪಿಯು ಮತ್ತು ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ ಈ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಮಾಹಿತಿಗೆ ಡಿಡಿಪಿಐ ಬಸ್ ನಿಲ್ದಾಣ, ವಾಸನ್ ಕಣ್ಣಿನ ಆಸ್ಪತ್ರೆ ಹತ್ತಿರ, ಮೂಲೆಮನೆ ಹೋಟಲ್ ಪಕ್ಕ, ಸೋಮೇಶ್ವರಪುರಂ, 14ನೇ ಕ್ರಾಸ್ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ದೂ.0816- 2278488, ಮೊ.9071021143, 9513136642 ಸಂಪರ್ಕಿಸಿ.