ಜಿಲ್ಲೆ

ಸರ್ಕಾರ ಬೀಳಿಸಲು ಜೆಡಿಎಸ್, ಬಿಜೆಪಿ ಕುತಂತ್ರ: ಸಚಿವ ದಿನೇಶ್ ಗುಂಡೂರಾವ್ ಹೊಸ ಬಾಂಬ್

ತುಮಕೂರು: ಸಚಿವರ ಮೇಲೆ ಅಸಮಧಾನಗೊಂದು ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಸಿಎಂ ಕೂಡ ಈ ಬಗ್ಗೆ ಮಾತನಾಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಂಗಾಪುರದಲ್ಲಿ ಆಪರೇಷನ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ, ಅಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಅವರಿಗೆ ವಿಶೇಷವಾಗಿ ಮಾಹಿತಿ ಇರಬಹುದು ಎಂದರು.

ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿರೋದು ಸತ್ಯ, ಇಬ್ಬರೂ ಸೇರಿ ಸರ್ಕಾರ ಬೀಳಿಸಲು ಷಡ್ಯಂತ್ರ ಮಾಡುತ್ತಿರಬಹುದು ಆದರೆ, ನಮ್ಮ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ, ಐದು ವರ್ಷ ಅಧಿಕಾರ ನಡೆಸ್ತಿವಿ ಜನರಿಗೆ ಒಳ್ಳೆಯ ಆಡಳಿತ ಕೂಡ ಕೊಡುತ್ತೀವೆ ಎಂದರು.