ಜಿಲ್ಲೆ

ಬಿಜೆಪಿ ಜತೆ ಮುಂದುವರಿದ ಜೆಸಿಎಂ ಮುನಿಸು!?

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ವಿಧಾನಸಭೆ ಚುನಾವಣೆ ಸೋಲಿನ ನಂತರ ರಾಜಕೀಯ ಚಟುವಟಿಕೆಗಳಿಂದ ದೂರವಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಬಿ.ಎಸ್.ಯಡಿಯೂರಪ್ಪ ಬರ ಅಧ್ಯಯನಕ್ಕೆ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ಗೈರಾಗಿದ್ದರು.

ಲೋಕಸಭೆ ಚುನಾವಣೆ ಟಿಕೆಟ್ ಬಯಸಿ ಇತ್ತೀಚೆಗಷ್ಟೇ ಬಿಎಸ್‌ವೈ ಭೇಟಿಯಾಗಿದ್ದರು ಎಂಬ ವದಂತಿಯ ನಡುವೆಯೂ ಮಾಧುಸ್ವಾಮಿ ಪಕ್ಷದ ಚಟುವಟಿಕೆಗಳಿಂದ ದೂರವಿರುವುದು ಅಚ್ಚರಿ ಮೂಡಿಸಿದೆ.

ಬಿಜೆಪಿ ಮುಖಂಡರೊAದಿಗೆ ಬಿಎಸ್‌ವೈ ತುಮಕೂರು, ಗುಬ್ಬಿ, ಶಿರಾ ತಾಲೂಕುಗಳಲ್ಲಿ ಬರ ಅಧ್ಯಯನ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕೆಲವು ದಿನಗಳಿಂದ ಬಿಜೆಪಿ ಚಟುವಟಿಕೆಗಳಿಂದ ದೂರವಿದ್ದ ಶಿರಾ ಮಾಜಿ ಶಾಸಕ ಡಾ.ಎಂ.ಸಿ.ರಾಜೇಶ್‌ಗೌಡ ಬಿಎಸ್‌ವೈ ಜತೆ ಕಾಣಿಸಿಕೊಂಡಿದ್ದು ಹೊಸ ಬೆಳವಣಿಗೆ ಎನ್ನಿಸಿತು.