ತುಮಕೂರು: ಜಿಲ್ಲೆಯಲ್ಲಿ ಶೇ.96ರಷ್ಟು ಜಾತಿಗಣತಿ ಪೂರ್ಣವಾಗಿದ್ದು ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಲಾಗಿದೆ. ಬಾಕಿ ಇರುವ ಶೇ.4ರಷ್ಟು ಸಮೀೆ ಪೂರ್ಣಗೊಳಿಸಲು ಗ್ರಾಪಂ ಸಿಬ್ಬಂದಿ, ವಾಟರ್ಮೆನ್ಗಳ ಸಹಾಯ ಪಡೆಯಲಾಗುತ್ತಿದೆ.
ಗ್ರಾಮಗಳಲ್ಲಿ ಬಾಕಿ ಉಳಿದ ಮನೆಗಳನ್ನು ಪತ್ತೆ ಹಚ್ಚುವ ಕೆಲಸ ಗ್ರಾಪಂಗೆ ವಹಿಸಲಾಗಿದೆ. ಸಮೀಕ್ಷೆಯನ್ನು ಪೂರ್ಣಗೊಳಿಸಲು ಪಿಡಿಒಗಳಿಗೆ ತರಬೇತಿ ನೀಡಲಾಗಿದ್ದು ಸಮೀೆ ಪೂರ್ಣಗೊಳಿಸುವ ಜವಬ್ಧಾರಿ ನೀಡಲಾಗಿದೆ. ಪಿಡಿಒಗಳು ವಾಟರ್ಮೆನ್, ಬಿಲ್ಕಲೆಕ್ಟರ್ಗಳ ಸಹಾಯ ಪಡೆದು ಸಮೀೆ ಪೂರ್ಣಗೊಳಿಸಬೇಕಿದೆ.
ಪಿಡಿಒಗಳು ಸರ್ವೇ ಮಾಡುವ ಜವಬ್ಧಾರಿಯನ್ನು ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್, ವ್ಯಾಟರ್ಮೆನ್ಗಳಿಗೆ ವಹಿಸುತ್ತಿದ್ದು ಎಲ್ಲಾ ಗ್ರಾಪಂಗಳು ಸರ್ವೆಯಲ್ಲಿ ಮುಳುಗಿವೆ. ಗ್ರಾಮೀಣ ಭಾಗದಲ್ಲಿ ವಲಹೆ ಹೋಗಿರುವ ಕುಟುಂಬಗಳು ಸಮೀೆಗೆ ಸಿಗುತ್ತಿಲ್ಲ ಅವರ, ಮೊಬೈಲ್ ಸಂಖ್ಯೆ ಪಡೆದು ಸಂಪರ್ಕಿಸುವ ಕೆಲಸ ನಡೆದಿದೆ.
ಜಿಲ್ಲೆಯಲ್ಲಿ 332 ಗ್ರಾಮಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಾಟರ್ಮೆನ್ಗಳಿದ್ದು ಅವರನ್ನು ಸರ್ವೆಗೆ ಮನೆಗಳನ್ನು ಹುಡುಕಲು ಬಳಸಿಕೊಳ್ಳಲಾಗುತ್ತಿದೆ.