ಜಿಲ್ಲೆ

30ರಂದು ಹಿರಿಯ ನಾಗರೀಕರಿಗೆ ಕ್ರೀಡೆ


ತುಮಕೂರು: ವಿಶ್ವ ಹಿರಿಯನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ ಆಗಸ್ಟ್​ 30ರಂದು ಬೆಳಗ್ಗೆ 10ಕ್ಕೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲೆಯ ಹಿರಿಯನಾಗರಿಕರಿಗಾಗಿ ಕ್ರೀಡೆ ಮತ್ತು ಕಾರ್ಯಕ್ರಮ ಆಯೋಜಿಸಿದೆ.

ಕ್ರೀಡಾ ವಿಭಾಗದಲ್ಲಿ ಮ್ಯೂಸಿಕಲ್​ ಚೇರ್​, ಬಿರುಸಿನ ನಡಿಗೆ, ಬಾಲ್​ ಇನ್​ ದಿ ಬಕೆಟ್​ ಹಾಗೂ ಸಾಂಸ್ಕತಿಕ ವಿಭಾಗದಲ್ಲಿ ಏಕಪಾತ್ರಾಭಿನಯ, ಗಾಯನ(ಜನಪದ ಅಥವಾ ಭಾವಗೀತೆ) ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 60 ರಿಂದ 70 ವರ್ಷ ಹಾಗೂ 70ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕ ಮಹಿಳಾ. ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು.

ಆಸಕ್ತ ಹಿರಿಯನಾಗರಿಕರು ಆ.29ರೊಳಗಾಗಿ ಹಿರಿಯನಾಗರಿಕರ ಸಹಾಯವಾಣಿ ಕೇಂದ್ರದ ಕಚೇರಿ, ಹಳೇ ಮಹಿಳಾ ಠಾಣೆಯ ಆವರಣ, ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ತುಮಕೂರು. ಇಲ್ಲಿಗೆ ಆಧಾರ್​ ಕಾರ್ಡ್​ನೊಂದಿಗೆ ಖುದ್ದು ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಮಾಹಿತಿಗೆ ಮೊ.8792040146 ಸಂಪರ್ಕಿಸಿ.