ಜಿಲ್ಲೆ

10ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ

ತುಮಕೂರು: ಜಿಲ್ಲಾಡಳಿತ, ರೆಡ್ಡಿ ಜನಸಂಘದ ಸಹಯೋಗದಲ್ಲಿ ಮೇ.10ರಂದು ಬೆಳಗ್ಗೆ 10.30ಕ್ಕೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ "ಹೇಮರೆಡ್ಡಿ ಮಲ್ಲಮ್ಮ ಜಯಂತಿ' ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲಾ ರೆಡ್ಡಿ ಜನಸಂಘದ ವತಿಯಿಂದ ರೆಡ್ಡಿ ಸಮುದಾಯದ 100 ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಹಾಗೂ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಆಯ್ದ ಪ್ರತಿಭಾವಂತ ರೆಡ್ಡಿ ಸಮುದಾಯದ ವಕೀಲರನ್ನು ಸನ್ಮಾನಿಸಲಾಗುತ್ತಿದೆ.