ಜಿಲ್ಲೆ

ಸಿದ್ಧಗಂಗಾ ಮಠದ ಮಕ್ಕಳಿಗೆ ಶ್ರವಣ ಜಾಗೃತಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಮಕ್ಕಳ ಕಿವಿ, ಮೂಗು ಹಾಗೂ ಗಂಟಲಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಿವಿಯಲ್ಲಿ ಸೋರಿಕೆ, ಅತಿಯಾದ ನೋವು, ಹೆಚ್ಚಾದ ಶೀತದಿಂದ ಕಿವಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ತಜ್ಞರ ಬಳಿ ತೋರಿಸಿಕೊಳ್ಳಬೇಕು ಎಂದು ಸಿದ್ಧಗಂಗಾ ವೈದ್ಯಕಿಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಎಂ.ಶಾಲಿನಿ ಸಲಹೆ ನೀಡಿದರು.

ಸಿದ್ಧಗಂಗಾ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ಸಿದ್ಧಗಂಗಾ ಮಠದ ಪ್ರಾಥಮಿಕ ಪಾಠ ಶಾಲಾ ಮಕ್ಕಳಿಗೆ ಶುಕ್ರವಾರ ಆಯೋಜಿಸಿದ್ದ ಶ್ರವಣ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಕಿವಿ,ಮೂಗು ಮತ್ತು ಗಂಟಲು ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಿವಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ರ್ನಿಲಕ್ಷ್ಯ ಮಾಡಿದರೆ ಪೂರ್ಣ ಕಿವುಡಾಗುವ ಅಪಾಯವಿದೆ ಹಾಗಾಗಿ, ಅತಿಯಾದ ಶಬ್ಧವಿರುವ ಜಾಗಗಳಿಂದ, ಕಿವಿಯ ವಿವಿಧ ಸೋಂಕುಗಳಿಂದ ರಕ್ಷಣೆ ಮಾಡಿಕೊಳ್ಳುಬೇಕು. ಕಿವಿಯ ಜೊತೆಗೆ ಗಂಟಲು ಹಾಗೂ ಮೂಗನ್ನು ಕೂಡ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಸಿದ್ಧಗಂಗಾ ಮಠದ ಹೆಚ್ಚುವರಿ ಆಡಳಿತಾಧಿಕಾರಿ ಮಲ್ಲಿಕಾರ್ಜುನ್​ ಮಾತನಾಡಿ, ಸಿದ್ಧಗಂಗಾ ವೈದ್ಯಕಿಯ ಕಾಲೇಜು ನಮ್ಮ ಮಠದ ಮಕ್ಕಳ ಆರೋಗ್ಯ ಕಾಳಜಿ ಜವಾಬ್ದಾರಿ ಹೊತ್ತಿರುವುದು ಶ್ಲಾಘನೀಯ ಕೆಲಸ. ಮಕ್ಕಳಿಗೆ ಅರಿವಿಲ್ಲದೆ ಎಕಿವಿ,ಮೂಗು ಹಾಗೂ ಗಂಟಲು ಸಮಸ್ಯೆಗೆ ಈಡಾಗುವುದುಂಟು ಹಾಗಾಗಿ ಇಂತಹ ಶಿಬಿರಗಳು ಮಕ್ಕಳ ಆರೋಗ್ಯ ಕಾಳಜಿಗೆ ಸಹಾಯಕವಾಗಲಿವೆ ಎಂದರು.

ಸಿದ್ಧಗಂಗಾ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ವತಿಯಿಂದ 600 ಮಕ್ಕಳಿಗೆ ಕಿವಿ, ಮೂಗು, ಗಂಟಲು ಪರೀಕ್ಷೆ ನಡೆಯಲಾಯಿತು. ಕಿವಿ, ಮೂಗು, ಗಂಟಲು ತಜ್ಞರಾದ ಡಾ.ಮಾನಸ ಇಎನ್​ಟಿ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿದರು. ವೈದ್ಯಕಿಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಕಮ್ಯುನಿಟಿ ವಿಭಾಗದ ಮುಖ್ಯಸ್ಥೆ ಡಾ.ಶ್ವೇತ, ಡಾ.ಯಶಸ್ವಿನಿ ನಿರೂಪಿಸಿ, ಇಎನ್​ಟಿ ವಿಭಾಗದ ಮುಖ್ಯಸ್ಥ ಡಾ.ವಿನಯ್​ ಭಟ್​ ಇದ್ದರು.