ಜಿಲ್ಲೆ

ಮುದ್ದಹನುಮೇಗೌಡ ಆ-ಪಕ್ಷ, ಈ-ಪಕ್ಷ, ವಿ.ಸೋಮಣ್ಣಗೆ ಟಿಕೆಟ್ ನೀಡಬೇಕು: ಸಂಸದ ಜಿಎಸ್‌ಬಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತುಮಕೂರು ಕ್ಷೇತ್ರದಿಂದ ಸೋಮಣ್ಣ ಸ್ಫರ್ಧಿಸಿದರೆ ಉತ್ತಮ ವಾತಾವರಣವಿದೆ. ಮುದ್ದಹನುಮೇಗೌಡ ಆಪಾರ್ಟಿ, ಈಪಾರ್ಟಿಯಲ್ಲಿದ್ದವರು. ನನ್ನ ವಿರುದ್ಧವೇ ಗೆದ್ದವರು, ನಾನು ಸೋಮಣ್ಣನಿಗೆ ಸಪೋರ್ಟ್ ಮಾಡುತ್ತೇನೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಮಣ್ಣ ಇವತ್ತಿಗೆ ಬಿಜೆಪಿಯಲ್ಲಿಯೇ ಇದ್ದಾರೆ, ಬಿಜೆಪಿಯಿಂದಲೇ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸುತ್ತೇನೆ ಎಂದು ಹೇಳಿದ್ದಾರೆ, ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.

ಬಿಜೆಪಿಯಿಂದ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಕೆಲಸ ಮಾಡುತ್ತೇವೆ, ದೆಹಲಿಗೆ ಹೋಗಿ ನಾನು ಇವರಿಗೆ ಟಿಕೆಟ್ ಕೊಡಿ ಎಂದು ಕೇಳಿದರೆ ಕೊಡ್ತಾರಾ? ಅದಕ್ಕೆ ನೀತಿ, ನಿಯಮಗಳಿವೆ. ಪಾರ್ಲಿಮೆಂಟರಿ ಬೋರ್ಡ್ ಇದೆ. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದೂ ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಜಿ.ಎಸ್.ಬಸವರಾಜು ಪ್ರತಿಕ್ರಿಯಿಸಿದರು.