ಜಿಲ್ಲೆ

ಗ್ರಾಹಕರ ಸಂವಾದ ಸಭೆ

ತುಮಕೂರು: ಬೆವಿಕಂ ಗ್ರಾಮೀಣ ಉಪವಿಭಾಗ-1 ಮತ್ತು 2ಕ್ಕೆ ಸಂಬಂಧಿಸಿದಂತೆ ಜ.18ರಂದು ಮಧ್ಯಾಹ್ನ 3ಕ್ಕೆ ಗ್ರಾಹಕರ ಸಂವಾದ ಸಭೆ ಏರ್ಪಡಿಸಲಾಗಿದೆ.

ನಗರದ ಹೊರಪೇಟೆ ವೃತ್ತದಲ್ಲಿರುವ ಆಯಾ ಕಚೇರಿಗಳಲ್ಲಿ ಗ್ರಾಹಕರ ಸಂವಾದ ಸಭೆ ನಡೆಯಲಿದ್ದು, ಗ್ರಾಮೀಣ ಉಪವಿಭಾಗ-1ಕ್ಕೆ ಸಂಬಂಧಿಸಿದಂತೆ ಕೋರಾ, ಸಿಟಿ ಕೆರೆ, ಬೆಳ್ಳಾವಿ ಶಾಖಾ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಹಾಗೂ ಗ್ರಾಮೀಣ ಉಪವಿಭಾಗ-2ಕ್ಕೆ ಸಂಬಂಧಿಸಿದಂತೆ ಹೆಬ್ಬೂರು, ಗೂಳೂರು, ಸಿದ್ದಾರ್ಥನಗರ ಶಾಖೆಗಳ ವ್ಯಾಪ್ತಿಗೆ ಬರುವ ಭೀಮಸಂದ್ರ ನಗರ ಹಾಗೂ ಹೆಗ್ಗೆರೆ, ಮಲ್ಲಸಂದ್ರ, ದೊಡ್ಡನಾರವಂಗಲ, ಗೂಳೂರು, ಹೆತ್ತೇನಹಳ್ಳಿ, ಹೊಳಕಲ್​, ನಾಗವಲ್ಲಿ, ಕಣಕುಪ್ಪೆ, ಗಂಗೋನಹಳ್ಳಿ, ಅರಿಯೂರು, ಹೆಬ್ಬೂರು, ಗಳಿಗೇನಹಳ್ಳಿ, ಬಳ್ಳಗೆರೆ, ನಿಡುವಳಲು, ಸಿರಿವರ ಗ್ರಾಮ ಪಂಚಾಯತಿಗಳ ಹೆಚ್​ಟಿ ಮತ್ತು ಎಲ್​ಟಿ ಗ್ರಾಹಕರು ಸಭೆಗೆ ಹಾಜರಾಗಿ ಸೂಕ್ತ ಸಲಹೆ, ದೂರುಗಳಿದ್ದಲ್ಲಿ ಪರಿಹರಿಸಿಕೊಳ್ಳಬಹುದು.