ಜಿಲ್ಲೆ

ಸರ್ಕಾರಿ ಶಾಲೆ ಅತಿಥಿ ಶಿಕ್ಷಕನ ಕೊಲೆ; ವಾಮಾಚಾರಕ್ಕೆ ಬಲಿ ಶಂಕೆ?

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕ ಕುಣಿಗಲ್ ತಾಲೂಕು ಕುಳ್ಳಿನಂಜಯ್ಯನಪಾಳ್ಯದ ಕೆ.ಜಿ.ಮರಿಯಪ್ಪ (47) ಎಂಬುವವರನ್ನು ದುಷ್ಕರ್ಮಿಗಳು ಅರಕೆರೆ ಸಮೀಪ ಕೊಚ್ಚಿ ಕೊಲೆಗೈದಿದ್ದಾರೆ.

ಮೋದೂರು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮರಿಯಪ್ಪ ಶನಿವಾರ ಶಾಲೆ ಮುಗಿಸಿಕೊಂಡು ಮನೆಗೆ ಬಂದು ನಂತರ ಕುಣಿಗಲ್‌ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು ಎನ್ನಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೈಕ್‌ನಲ್ಲಿ ವಾಮಾಚಾರ ವಸ್ತು ಪತ್ತೆ?:
ವಾಮಾಚಾರಕ್ಕೆ ಕುಖ್ಯಾತಿ ಪಡೆದಿದ್ದ ಕೆ.ಜಿ.ಮರಿಯಪ್ಪ ದೇವಾಲಯ ಸೃಷ್ಠಿಸಿಕೊಂಡು ವಾಮಾಚಾರ ಮಾಡುತ್ತಿದ್ದನ್ನು ಎನ್ನಲಾಗಿದ್ದು, ಇದಕ್ಕೆ ಪೂರಕವಾಗುವಂತೆ ಮರಿಯಪ್ಪನ ಬೈಕ್‌ನಲ್ಲಿ ವಾಮಾಚಾರದ ಪೂಜೆ ಸಾಮಗ್ರಿಗಳು ಪತ್ತೆ ಆಗಿವೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ಎಎಸ್‌ಪಿ ಮರಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.