ಮಧುಗಿರಿ : ಪಟ್ಟಣದ ಲಿಂಗೇನಹಳ್ಳಿಯಲ್ಲಿರುವ ಕೆ ಆರ್ ಐ ಡಿ ಎಲ್ ಇಲಾಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಛೇರಿಯಲ್ಲಿರುವ ಕೆಲ ಕಡತಗಳು ಸುಟ್ಟು ಭಸ್ಮವಾಗಿವೆ.
ಇಂದೂ ಬೆಳಗ್ಗೆ ಸುಮಾರು 6 ಘಂಟೆಯ ಸಮಯದಲ್ಲಿ ಇಲಾಖೆಯ ಪಕ್ಕಾದಲ್ಲಿರುವ ಹೋಟೆಲ್ ಮಾಲೀಕ ಕಛೇರಿಯ ಒಳಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಅಧಿಕಾರಿಗಳು ಬರುವ ವೇಳೆಗೆ ಕಛೇರಿಯಲ್ಲಿರುವ ಸುಮಾರು ಕಡತಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹಾಳಾಗಿವೆ ಈ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರನ್ನು ಇಲಾಖೆಯ ಇಇ ಸಿಂಧೂ ರವರು ದಾಖಲಿಸಿದ್ದು ಪಟ್ಟಣದ ಸಾರ್ವಜನಿಕರು ವರ್ಷದ ಕೊನೆಯ ಅವಧಿಯಾದ ಮಾರ್ಚ್ ತಿಂಗಳಲ್ಲಿಯೇ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿರುವುದಕ್ಕೆ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.