ಜಿಲ್ಲೆ

ಒಪಿಎಸ್ ನೌಕರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ

ತುಮಕೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 2.50ಲಕ್ಷ ಎನ್‌ಪಿಎಸ್ ನೌಕರರಿಗೆ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ತುಮಕೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ 2.50ಲಕ್ಷ ನೌಕರರಿಗೆ ಅನುಕೂಲವಾಗುವಂತೆ ಒಪಿಎಸ್ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

7ನೇ ವೇತನ ಆಯೋಗ ಇದೇ ನವೆಂಬರ್‌ನಲ್ಲಿ ವರದಿ ನೀಡಲಿದ್ದು ಸರ್ಕಾರ ನೌಕರರ ಬೇಡಿಕೆ ಈಡೇರಿಸಲಿದೆ, ನೌಕರರ ಬಹುಮುಖ್ಯ ಬೇಡಿಕೆಯಾಗಿರುವ ಎನ್‌ಪಿಎಸ್ ರದ್ದುಗೊಳಿಸಿ ಒಪಿಸಿ ಜಾರಿ ಖಚಿತ, ಇದು ಭರವಸೆ ಅಲ್ಲ, ಮಾಡೇ ಮಾಡುತ್ತೇವೆ ಈಗಾಗಲೇ ಸಮಿತಿ ಕೂಡ ರಚನೆಯಾಗಿದ್ದು ಪ್ರಣಾಳಿಕೆಯ ಅನುಷ್ಟಾನಕ್ಕೆ ನಾವು ಬದ್ಧ ಎಂದರು.

ನೌಕರರು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ ಚಿಕಿತ್ಸೆಗಾಗಿ ಆರೋಗ್ಯ ಸಂಜೀವಿನಿ ಕಾರ್ಯಕ್ರಮ ಕೂಡ ಶೀಘ್ರದಲ್ಲಿಯೇ ಅನುಷ್ಟಾನವಾಗಲಿದೆ ಎಂದು ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಸಾವಿರಾರು ನೌಕರರ ಮುಂದೆ ಘೋಷಿಸಿದರು