ಜಿಲ್ಲೆ

ಮನೆಯಿಂದ ಹೊರಗಿದ್ದ ಬಾಣಂತಿ, ಮಗು ಮನೆಗೆ ಸೇರಿಸಿದ ತಹಸೀಲ್ದಾರ್

ತುರುವೇಕೆರೆ: ಮಾಯಸಂದ್ರ ಹೋಬಳಿ ವರಾಹಸಂದ್ರ ಗೊಲ್ಲರಹಟ್ಟಿಯಲ್ಲಿ ಸಂಪ್ರದಾಯದAತೆ ಮನೆಯಿಂದ ಹೊರಗಿಟ್ಟಿದ್ದ ಬಾಣಂತಿ, ಮಗು ಮತ್ತು ಇಬ್ಬರು ಋತುಮತಿಯರಾದ ಯುವತಿಯರಿಗೆ ಅರಿವು ಮೂಡಿಸಿ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮನೆಗೆ ಸೇರಿಸಿದರು.

ವರಾಹಸಂದ್ರ ಗೊಲ್ಲರಹಟ್ಟಿಯಲ್ಲಿ ಅಧಿಕಾರಿಗಳೂ ಇತ್ತೀಚೆಗಷ್ಟೇ ಮೌಢ್ಯ ಸಂಪ್ರದಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು ಆದರೆ, ಕೆಲವರು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಮನೆಯಿಂದ ಹೊರಗಿಟ್ಟಿರುವ ಬಗ್ಗೆ ಮಾಹಿತಿ ಪಡೆದು ಮತ್ತೆ ಭೇಟಿ ನೀಡಿ ಮತ್ತೊಮ್ಮೆ ಮನವಿ ಮಾಡಿ ಅರಿವು ಮೂಡಿಸಿದರು.

ಕಂದಾಯ ವೃತ್ತ ನಿರೀಕ್ಷಕ ರಂಗಸ್ವಾಮಿ, ಗ್ರಾಮಲೆಕ್ಕಿಗ ಅರುಣï ಮತ್ತಿತರರು ಇದ್ದರು.