ಜಿಲ್ಲೆ

ಪ್ರಥಮ ಡಿಪ್ಲೋಮಾ ಪ್ರವೇಶ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಿಲ್ಲೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್​ಗಳಲ್ಲಿ 2025&-26ನೇ ಸಾಲಿನ ಪ್ರಥಮ ಡಿಪ್ಲೋಮಾ ಪ್ರವೇಶಾತಿಗೆ ಸಂಬಂಧಿಸಿದಂತೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸೀಟು ಹಂಚಿಕೆ ಮಾಹಿತಿ ಈಗಾಗಲೇ ಪ್ರಕಟಿಸಲಾಗಿದೆ.

ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆಯ್ಕೆ ಮಾಡಿದ ಸಂಸ್ಥೆಗೆ ನಿಗಧಿತ ಶುಲ್ಕ ಮತ್ತು ಎಲ್ಲಾ ಮೂಲದಾಖಲೆಗಳೊಂದಿಗೆ ಮೇ 24 ಮತ್ತು 26ರ ಸಂಜೆ 5 ಗಂಟೆಗೆಯೊಳಗೆ ತಪ್ಪದೇ ಹಾಜರಾಗಿ ಪ್ರವೇಶ ಪಡೆಯಬೇಕೆಂದು ಪಾಲಿಟೆಕ್ನಿಕ್​ನ ಪ್ರಾಂಶುಪಾಲರು ಸೂಚಿಸಿದ್ದಾರೆ.

ಮಾಹಿತಿಗೆ ಮೊ.9448647636, 9844434206, 9008106036 ಅಥವಾ ದೂ.0816- 2970104, 2006134 ಸಂಪರ್ಕಿಸಿ.