ತುಮಕೂರು: ಹಾವು ಕಚ್ಚಿ ಹೂವಿನ ತೋಟದಲ್ಲಿ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕು ಗೌರಗಾನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ತೋಟದಲ್ಲಿ ಹೂ ಕೀಳುತ್ತಿದ್ದ ಶಾರದಮ್ಮ(42) ಮೃತ ದುರ್ದೈವಿ. ಹಾವು ಕುಡಿದ ವಿಷಯ ತಿಳಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಪ್ರಾಣ ಹೋಗಿದೆ. ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.