Phone call from unknown number late at night. Scam, fraud or phishing with smartphone concept. Prank caller, scammer or stranger. Man answering to incoming call. Hoax person with fake identity. 
ಜಿಲ್ಲೆ

ಹೊಟ್ಟೆತುಂಬ ಬಾಡೂಟ ತಿಂದವರ ಪೋನ್​ಪೇ ನಕಲಿ; ಮೂವರು ಯುವಕರು ಪೊಲೀಸರ ವಶಕ್ಕೆ

ತುಮಕೂರು: ಹೋಟೆಲ್​ಗೆ ಬಂದು ಹೊಟ್ಟೆ ಬಿರಿಯುವಂತೆ ಮಾಂಸಾಹಾರ ಸೇವಿಸಿ ಬಿಲ್​ ನೀಡುವಾಗ ನಕಲಿ ಪೋನ್​ಪೇ ಮೂಲಕ ಮಾಲೀಕನಿಗೆ ಮೋಸ ಮಾಡಿದ್ದ ಒಬ್ಬಳು ಯುವತಿ ಸಹಿತ ಮೂವರ ಗುಂಪನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಕುಣಿಗಲ್​ ತಾಲೂಕು ಎಡೆಯೂರು ಬಳಿಯ "ವಾಸು ನಮ್ಮ ಮನೆ ಬಾಡೂಟ' ಹೋಟೆಲ್​ನಲ್ಲಿ ಸೋಮವಾರ ರಾತ್ರಿ ಟನೆ ನಡೆದಿದ್ದು ತುರುವೇಕೆರೆ ಮೂಲದ ಮೂವರು ಪೊಲೀಸರ ಅತಿಥಿಯಾಗಿದ್ದಾರೆ.

ಮೂವರು ಹೋಟೆಲ್​ಗೆ ಬಂದು 700ರೂ. ಬಿಲ್​ ಆಗುವವರೆಗೂ ನಾನ್​ವೆಜ್​ ಊಟ ಮಾಡಿದ್ದಾರೆ, ಬಿಲ್​ ನೀಡಿದ ಸಂದೀಪ್​ ಪೋನ್​ಪೇಗೆ ಬಿಲ್​ ಸಂದಾಯವಾಗಿರುವ ಬಗ್ಗೆ ಸ್ಕ್ರೀನ್​ಶಾಟ್​ ತೋರಿಸಿದ್ದಾರೆ. ಆದರೆ, ವಾಸ್ತವದಲ್ಲಿ ಹಣವೇ ವರ್ಗಾವಣೆಯಾಗಿಲ್ಲ. ಈ ಬಗ್ಗೆ ಅನುಮಾನ ಬಂದು ಮತ್ತೆಮತ್ತೆ ಪರಿಶೀಲಿಸಿದಾಗ ಉದ್ದೇಶಪೂರ್ವಕವಾಗಿ ಮೋಸ ಮಾಡಿರುವುದು ಬಯಲಾಗಿದೆ.

ಕೂಡಲೇ ಎಚ್ಚತ್ತ ಹೋಟೆಲ್​ ಸಿಬ್ಬಂದಿ ಮೂವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಕಲಿ ಪೋನ್​ಪೇ ಮೂಲಕ ಸಾಕಷ್ಟು ಜನರನ್ನು ವಂಚಿಸಿರುವುದು ಮೇಲ್ನೋಟಕ್ಕೆ ದೃಢವಾಗಿರುವ ಹಿನ್ನೆಲೆಯಲ್ಲಿ ಅಮೃತೂರು ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.