ಜಿಲ್ಲೆ

ಪ್ರತಿಷ್ಠಿತ ಎಂಪ್ರೆಸ್ ಸರ್ಕಾರಿ ಶಾಲೆಗೆ ಲಾವಣ್ಯ ಸಿಎಂ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ 2023-24ನೇ ಸಾಲಿನ ವಿದ್ಯಾರ್ಥಿ ಸಂಸತ್ ಚುನಾವಣೆಯಲ್ಲಿ ಲಾವಣ್ಯ ಸಿಎಂ ಆಗಿ ಆಯ್ಕೆಯಾದರು.

ಭಾರತ ಸರ್ಕಾರದ ಚುನಾವಣಾ ನೀತಿ ನಿಯಮದಂತೆ ಶಾಲೆಯಲ್ಲಿ ಬ್ಯಾಲೆಟ್ ಬಳಸಿ ಚುನಾವಣೆ ನಡೆಸಲಾಯಿತು. 65 ವಿದ್ಯಾರ್ಥಿಗಳು ಆಯ್ಕೆ ಬಯಸಿ ಚುನಾವಣೆಯಲ್ಲಿ ಭಾಗವಹಿಸಿದ್ದರು. ಅತಿ ಹೆಚ್ಚು ಮತ ಪಡೆದ 26 ಮಕ್ಕಳನ್ನು ಸದಸ್ಯೆರನ್ನಾಗಿ ಆಯ್ಕೆ ಮಾಡಲಾಯಿತು.

ಹೆಚ್ಚು ಮತ ಪಡೆದು ಆಯ್ಕೆಯದ 26 ಮಕ್ಕಳಿಂದ ಸಚಿವ ಸಂಪುಟ ಸಭೆ ನಡೆಸಿ ಲಾವಣ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಹತ್ತು ಜನ ವಿದ್ಯಾರ್ಥಿಗಳಿಂದÀ ಸಂಪುಟದಲ್ಲಿ ಮಂತ್ರಿಮAಡಲ ರಚನೆ ಮಾಡಲಾಯಿತು.

ಸಚಿವ ಸಂಪುಟದ ಎಲ್ಲಾ ಸದಸ್ಯರಿಗೂ ಪ್ರಮಾಣವಚನ ಬೊಧಿಸಿ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲ ವಿಷಯಕ್ಕೆ ಸಂಬAಧಿಸಿದ ಸಂಘದ ರಚನೆ ಮಾಡಲಾಗಿತ್ತು. ಯುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೆತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.

ಉಪಪ್ರಾಚಾರ್ಯ ಮನೋಹರ, ಶಿಕ್ಷಕರಾದ ಸಿ.ಕೆ ಉಮೇಶ್ , ಎಂ ರಾಜಣ್ಣ, ಮೊಹಮದ್ ಇಸ್ಮಾಯಿಲ್, ಕೆ.ರಘು, ವಿದ್ಯಾರ್ಥಿ ಸಂಸತ್ ಚುನಾವಣೆಯ ಮುಖ್ಯಸ್ಥ ಶಶಿಕುಮಾರ್, ಸಾಂಸ್ಕೃತಿಕ ಸಂಘದ ಮುಖ್ಯಸ್ಥ ಸುಜಾತ ಮತ್ತಿತರರು ಇದ್ದರು.