ಜಿಲ್ಲೆ

ಸಂಸದರ ಆಪ್ತನ ಮೇಲೆ ಹಲ್ಲೆ , ನಾಲ್ವರ ವಿರುದ್ಧ ಪ್ರಕರಣ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನಗರ ವಿಧಾನಸಭಾ ಕ್ಷೇತ್ರದಲ್ಲು ರಾಜಕೀಯ ದ್ವೇಷ ವೈಯಕ್ತಿಕ ಹಲ್ಲೆ ಹಂತಕ್ಕೆ ತಲುಪಿದೆ. ಖಾಸಗಿ ಲಾಡ್ಜ್ನಲ್ಲಿ ತಂಗಿದ್ದ ಸಂಸದ ಜಿ.ಎಸ್.ಬಸವರಾಜು ಆಪ್ತ ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮೇಲೆ ದುಷ್ಕರ್ಮಿಗಳ ಗುಂಪೊAದು ಹಲ್ಲೆ ನಡೆಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಸಿಎನ್‌ವಿ ಛೇಂಬರ್ಸ್ನಲ್ಲಿ ತಂಗಿದ್ದ ಕುಂದರನಹಳ್ಳಿ ರಮೇಶ್ ರೂಂಗೆ 10-15ರ ಗುಂಪೊAದು ಬಲವಂತವಾಗಿ ಒಳನುಗ್ಗಿ ಸೂಟ್ ಕೇಸ್, ಬ್ಯಾಗ್ ಚೆಕ್ ಮಾಡಿದ್ದಲ್ಲದೆ, ಈ ವೇಳೆ ಪ್ರಶ್ನಿಸಲು ಹೋದಾಗ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಚಾಲಕ ಬಸವರಾಜು ಬ್ಯಾಗ್‌ನಲ್ಲಿದ್ದ 23 ಸಾವಿರ ನಗದು, ದಾಖಲಾತಿಗಳನ್ನು ಕಿತ್ತುಕೊಂಡು ಹೋಗಿದ್ದಲ್ಲದೆ ಕೆಳಗೆ ಬಾ ನಿನ್ನ ಮುಗಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ರಮೇಶ್ ದೂರಿದ್ದು ಹೊಸ ಬಡವಾವಣೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಸಂಬAಧ ನಿಖಿಲ್, ಸಾದಿಕ್, ರಕ್ಷಿತ್, ಹೇಮಂತ್ ವಿರುದ್ಧ ಸೋಮವಾರ ಹೊಸಬಡವಾಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣಾ ಆಯೋಗ ಹೈಜಾಕ್: ಸೋಲಿನ ಭೀತಿಯಿಂದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಹಾಗೂ ಎಂಪಿ ಆಪ್ತ ಕುಂದರನಹಳ್ಳಿ ರಮೇಶ್ ನಗರ ಅಭ್ಯರ್ಥಿಯ ಪರ ಹಣ ಹಂಚಿಕೆ ಮಾಡುತ್ತಿದ್ದು ಅದನ್ನು ತಡೆಯಲು ಹೋದ ಅಮಾಯಕರ ವಿರುದ್ಧವೇ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸೊಗಡುಶಿವಣ್ಣ ಆರೋಪಿಸಿದ್ದಾರೆ.

ಎನ್‌ಇಪಿಎಸ್ ಠಾಣೆಗೆ ಖುದ್ದು ಸಂಸದ ಜಿ.ಎಸ್.ಬಸವರಾಜು ಭೇಟಿ ನೀಡಿದ್ದು ಜೆಡಿಎಸ್‌ನ ಮುಖಂಡರು ಠಾಣೆಗೆ ಹೋದಾಗ ಅವರನ್ನು ಒಳಗಡೆ ಬಿಟ್ಟುಕೊಳ್ಳದೆ ಸರ್ವಾಧಿಕಾರಿ ಧೋರಣೆ ತೋರಲಾಗಿದೆ. ಚುನಾವಣಾ ಆಯೋಗವನ್ನು ಬಿಜೆಪಿಯವರು ಹೈಜಾಕ್ ಮಾಡಿದ್ದಾರೆ ಎಂದು ಶಿವಣ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.