ತುಮಕೂರು: ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಡಿಕೆಎಸ್ ಛಾರಿಟಬಲ್ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗಮೇಳದಲ್ಲಿ ಭಯಾನಕ ಸುಂಟರಗಾಳಿ ಕೆಲಕಾಲ ಆತಂಕ ಸೃಷ್ಠಿಸಿತ್ತು.
ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದ ಉದ್ಘಾಟನೆ ಪೂರ್ಣಗೊಂಡು ಅತಿಥಿಗಳೆಲ್ಲಾ ತೆರಳಿದ ನಂತರ ಕಾಣಿಸಿಕೊಂಡು ಸುಂಟರಗಾಳಿ ರಭಸಕ್ಕೆ ನೋಂದಣಿಗಾಗಿ ಹಾಕಿದ್ದ ಟೆಂಟ್‌ಹೌಸ್ ಎಲ್ಲಾ ಚೆಲ್ಲಾಪಿಲ್ಲಿಯಾಗಿದೆ.
ಏಕಾಏಕಿ ಕಾಣಿಸಿಕೊಂಡಿದ್ದ ಸುಂಟರಗಾಳಿಯಿAದ ಶಾಮಿಯಾನ ಹಾರಿ ಹೋಗಲಾರಂಭಿಸಿದಾಗ ಅಲ್ಲಿದ್ದ ಯುವಜನರು ತಪ್ಪಿಸಿಕೊಳ್ಳಲು ಪರದಾಡಿದರು, ಆಕಾಶದೆತ್ತರಕ್ಕೆ ಎದ್ದ ಕೆಂದೂಳು ಎಲ್ಲರ ಕಣ್ಣುಗಳಿಗೂ ರಾಚಿದ್ದರಿಂದ ಎಲ್ಲರೂ ಅಲ್ಲಿಯೇ ರಕ್ಷಣೆ ಪಡೆಯಲು ಬಿದ್ದಿದ್ದ ಶಾಮಿಯಾನ ಹೊದ್ದರು.
ಉದ್ಯೋಗ ಬಯಸಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 2 ಸಾವಿರಕ್ಕೂ ಹೆಚ್ಚು ಯುವ ಜನರಿಗೆ ಮೇಳದಲ್ಲಿ ಬೀಸಿದ ಸುಂಟರಗಾಳಿ ನಿರಾಸೆ ಮೂಡಿಸಿತು. ಗಾಳಿಯ ರಭಸಕ್ಕೆ ಟೆಂಟ್‌ಹೌಸ್ ಕಳಚಿಬಿದ್ದಿರುವ ದೃಶ್ಯವನ್ನು ಮೊಬೈಲ್‌ಬಲ್ಲಿ ಸೆರೆಹಿಡಿಯಲಾಗಿದ್ದು ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ.