ಜಿಲ್ಲೆ

ಜೆಡಿಎಸ್ ಮಾಜಿ ಶಾಸಕ ಸುರೇಶ್ ಬಾಬು ಕಾಂಗ್ರೆಸ್ ಕದ ತಟ್ಟಿದ್ದರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೊಸ ಬಾಂಬ್

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಮಾತುಕತೆ ನಡೆಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಬುಕ್ಕಾಪಟ್ಟಣದಲ್ಲಿ ಕಾರ್ಯಕರ್ತರನ್ನು ಉz್ದೆÃಶಿಸಿ ಮಾತನಾಡಿದ ಅವರು, ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ನಮ್ಮ ಜತೆ ಮಾತುಕತೆ ನಡೆಸಿದ್ದರು, ಕೊನೆಗೆ ಕೆಲವು ಕಂಡಿಷನ್‌ಗಳನ್ನು ಹಾಕಿದರು, ಕಾಂಗ್ರೆಸ್‌ನಲ್ಲಿ ಷರತ್ತು ಹಾಕಿಕೊಂಡು ಸೇರಲು ಸಾಧ್ಯವಿಲ್ಲ ಎಂದು ವಾಪಸಾದರು ಎಂದರು.

ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಸಾಕಷ್ಟು ವರ್ಷದಿಂದ ಗೆದ್ದಿಲ್ಲ, ಈ ಚುನಾವಣೆಯಲ್ಲಿ ಗೆಲುವು ಪಡೆಯಬೇಕು ಎಂದರು.

ಚಿಕ್ಕನಾಯಕನಹಳ್ಳಿಯಲ್ಲಿ ಸಂಘಟನೆ ಮಾಡಲು ಧನಂಜಯ್, ಸಾಸಲು ಸತೀಶ್‌ಗೆ ಅವಕಾಶ ನೀಡಿದ್ದೆವು ಆದರೆ, ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್‌ಗೆ ನಾನು ಗಾಳ ಹಾಕಿಕೊಂಡು ಕಾಯುತ್ತಿದ್ದೆ ಎಂದರು.

ಕಾAಗ್ರೆಸ್ ಅಭ್ಯರ್ಥಿ ಕೆ.ಎಸ್.ಕಿರಣ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಕ್ಕಣ್ಣ, ಬಸವರಾಜು ಮತ್ತಿತರರು ಇದ್ದರು.