ತುಮಕೂರು ವಿವಿಯಲ್ಲಿ ಸ್ನಾತಕೋತ್ತರ ಜೈನ ಡಿಪ್ಲೋಮ ಕೋರ್ಸ್ ಆರಂಭಿಸಿದ್ದು ಆಸಕ್ತ ವಿದ್ಯಾರ್ಥಿಗಳಿಂದ ಅಧ್ಯಯನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಒಂದು ವರ್ಷದ ಎರಡು ಸೆಮಿಸ್ಟರ್‌ಗಳ ಈ ಕೋರ್ಸ್ ಪ್ರತಿ ಸೆಮಿಸ್ಟರ್‌ನಲ್ಲಿ ಎರಡು ಪತ್ರಿಕೆ ಇರುತ್ತವೆ. ವಾರಕ್ಕೆ ಎರಡು ದಿನ ತಲಾ ಎರಡು ಗಂಟೆಗಳ ತರಗತಿ ನಡೆಯಲಿದೆ.
ಪ್ರವೇಶಾತಿಗೆ ವಯಸ್ಸಿನ ನಿರ್ಬಂಧವಿಲ್ಲ. ಯಾವುದೇ ಪದವೀಧರರಾದರೂ ಸೇರಬಹುದು. ಅರ್ಜಿ ಸಲ್ಲಿಸಲು ಅ.5 ಕೊನೆಯ ದಿನ. ವಿವಿಯ ವೆಬ್‌ಸೈಟ್ http://tumkuruniversity.ac.in/ ಮೂಲಕ ಅರ್ಜಿ ಸಲ್ಲಿಸಬಹುದು.
ಆಸಕ್ತರು ಮೊ.8904464268, 9448768567 ಸಂಪರ್ಕಿಸಿ.