ತುಮಕೂರು: ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ ತಂಡದ ಒಂದು ತಂಡ ಶುಕ್ರವಾರ ತುಮಕೂರಿಗೆ ಭೇಟಿ ನೀಡಿ ತುಮಕೂರು ಭವಿಷ್ಯದ ಐಟಿ ಹಬ್ ಆಗುವಂತಹ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಿದೆ. ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ ತಂಡದವರ ಈ ಭೇಟಿ ತಾಂತ್ರಿಕ ಮತ್ತು ನಾವೀನ್ಯತೆಯ ಉದ್ಯಮಗಳಿಗೆ ತುಮಕೂರು ಉತ್ತಮ ತಾಣವಾಗುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಎನ್ನಿಸಿದೆ.
ಈ ತಂಡದಲ್ಲಿ ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ನ ಸಿಇಒ ಸಂಜೀವ್ಗುಪ್ತ, ಮ್ಯಾನೇಜರ್ಗಳಾದ ಬಿ.ಕೆ.ಭರತ್ಚಂದ್ರ, ಸುವಿನ್ ನಾರಾಯಣ ಇದ್ದರು.
ಭವಿಷ್ಯದ ಐಟಿ ಹಬ್ ಆಗಲು ತುಮಕೂರಿಗಿರುವ ಸಾಮರ್ಥ್ಯ ಮತ್ತು ಈ ಜಿಲ್ಲೆಯಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಂಡ ತುಮಕೂರು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಜತೆ ಮಾತುಕತೆ ನಡೆಸಿದರು. ತುಮಕೂರು ಜಿಲ್ಲೆಯ ವಾಣಿಜ್ಯ ಮಂಡಳಿ ಅಧ್ಯಕ್ಷ ಪಿ.ಆರ್.ಕುರಂದ್ವಾಡ್ ಅ ಮುಂದಾಳತ್ವದಲ್ಲಿ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ಪ್ರಮುಖರೊಂದಿಗೆ ಚರ್ಚೆ ನಡೆಸಿತು.
ಐಟಿ ಕಂಪನಿಗಳು ಮತ್ತು ಸ್ಟಾರ್ಟಪ್ ಗಳಿಗೆ ಸ್ಥಳ ಲಭ್ಯತೆಗಾಗಿ ತುಮಕೂರು ನಗರದ ಸೆಂಟ್ರಲ್ ಲೈಬ್ರರಿ , ಮಹಾತ್ಮ ಗಾಂಧಿ ಸ್ಟೇಡಿಯಂ, ವಸಂತನರಾಸಪುರ ಕೈಗಾರಿಕಾ ಪ್ರದೇಶ ಫೇಸ್ 1-6, ಭಾರತೀಯ ಫುಡ್ ಪಾರ್ಕ್, ಸಿದ್ದಗಂಗಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಭೇಟಿ ನೀಡಿದ್ದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶ ಲಿಂಗರಾಜು, ಕೆಐಎಡಿಬಿಯ ಎಇಇ ಪ್ರಸನ್ನ ಇದ್ದರು.