ಜಿಲ್ಲೆ

ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ವ್ಯಕ್ತಿ ಸಾವು

ತುಮಕೂರು: ತಾಲೂಕಿನ ಬೆಳ್ಳಾವಿ ಕ್ರಾಸ್​ನಲ್ಲಿ ವಯೋ ಸಹಜ ಕಾಯಿಲೆಯಿಂದ ನರಳಿ ಚರಂಡಿಯಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ಸುಮಾರು 60 ವರ್ಷದ ಅಪರಿಚಿತ ವೃದ್ಧ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜು.10ರಂದು ಮೃತಪಟ್ಟಿದ್ದಾರೆ.


ಮೃತ ವ್ಯಕ್ತಿ 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈನ ಮೊಣಕೈ ಮೇಲೆ ಆಂಜನೇಯ ದೇವರ ಚಿತ್ರದ ಹಚ್ಚೆ ಗುರುತು ಇರುತ್ತದೆ. ಮೃತನ ಮೈಮೇಲೆ ಕಪ್ಪು ಕೆಂಪು ಗೆರೆಗಳುಳ್ಳ ಚೆಕ್ಸ್​ ಷರ್ಟ್​, ನೀಲಿ ಬಣ್ಣದ ಪ್ಯಾಂಟ್​ ಧರಿಸಿದ್ದಾರೆ.


ವಾರಸುದಾರರು ಇದ್ದಲ್ಲಿ ಮೊ.9480802900, 0816 -20-31-49 ಸಂಪರ್ಕಿಸಿ.