ತುಮಕೂರು: ನಗರದ ಚೈತನ್ಯ ಕ್ಯಾಂಟೀನ್ ಹಿಂಭಾಗದಲ್ಲಿ ಅಸ್ವಸ್ಥನಾಗಿ ಕುಳಿತಿದ್ದ ಸುಮಾರು 50ವರ್ಷದ ಅಪರಿಚಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾ.27ರಂದು ಮೃತಪಟ್ಟಿದ್ದಾರೆ.
168 ಸೆಂ.ಮೀ. ಎತ್ತರ, ದುಂಡು ಮುಖ, ತೆಳುವಾದ ಶರೀರ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಎದೆ ಮೇಲೆ ಗೋಧಿಕಾಳು ಗಾತ್ರದ ಮಚ್ಚೆ ಇರುತ್ತದೆ. ಈತನ ಮೈಮೇಲೆ ಬೂದು, ನೀಲಿ ಮಿಶ್ರಿತ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.
ಮೃತನ ವಾರಸುದಾರರು ಇದ್ದಲ್ಲಿ ದೂ.0816- 2278388, ಮೊ.ಸಂ. 9480802945 ಸಂಪರ್ಕಿಸಿ.