ಜಿಲ್ಲೆ

ಗಮನಸೆಳೆದ ಜಿಲ್ಲಾಧಿಕಾರಿ, ಜಿಪಂ ಸಿಇಒ ಸರ್ಕಾರಿ ಬಸ್ ಪ್ರಯಾಣ

ತುಮಕೂರು: ರಾಜ್ಯದೆಲ್ಲೆಡೆ ಚಾಲ್ತಿಯಾಗಿರುವ ಅಧಿಕಾರಿಗಳ ಬಸ್ ಪ್ರಯಾಣ ತುಮಕೂರಿನಲ್ಲಿಯೂ ಮುಂದುವರಿದಿದೆ.

ಕುಣಿಗಲ್ ತಾಲೂಕು ಹುಲಿಯೂರುದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯುವ "ಜನತಾದರ್ಶನ ಕಾರ್ಯಕ್ರಮ"ದಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೂ ಸರ್ಕಾರಿ ಬಸ್ ನಲ್ಲಿ‌ ಪ್ರಯಾಣಿಸಿ ಗಮನಸೆಳೆದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು ನೇತೃತ್ವದಲ್ಲಿ ಅಧಿಕಾರಿಗಳ ತಂಡ ತುಮಕೂರಿನಿಂದ ಹುಲಿಯೂರುದುರ್ಗಕ್ಕೆ ಪ್ರಯಾಣಿಸಿದರು.