ಜಿಲ್ಲೆ

ಡಿಸಿಎಂ ಸ್ವಾಗತಿಸದ "ಜಿಲ್ಲಾಧಿಕಾರಿ' ಶುಭಕಲ್ಯಾಣ್​!?

ತುಮಕೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಆಗಮಿಸಿ ಸ್ವಾಗತಿಸದ ಬಗ್ಗೆ ತರಹೇವಾರಿ ಚರ್ಚೆಗಳು ಆರಂಭವಾಗಿವೆ.

ಎತ್ತಿನಹೊಳೆ ನೀರಾವರಿ ಯೋಜನೆಯ ಭೂಸ್ವಾಧಿನ ಕಾರ್ಯವನ್ನು ತ್ವರಿತವಾಗಿ ಪ್ರಗತಿ ಸಾಧಿಸಿದ ಸಲುವಾಗಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಾರಿಗೆ ಮತ್ತು ಕಾರ್ಪೊರೇಟ್​ ವ್ಯವಹಾರಗಳ ರಾಜ್ಯ ಸಚಿವ ಹರ್ಷ ಮೆಲ್ಹೋತ್ರ ಅವರಿಂದ ತುಮಕೂರು ಜಿಲ್ಲಾಧಿಕಾರಿ ಸ್ವೀಕರಿಸಿದ್ದ " ಐಐಎನ್​ಐ&2025' ಪ್ರಶಸ್ತಿ ಸ್ವೀಕರಿಸಿದ್ದು ಡಿ.ಕೆ.ಶಿವಕುಮಾರ್​ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ.

ನೀರಾವರಿ ಇಲಾಖೆಗಳ ಶ್ರಮದಿಂದ ತ್ವರಿತ ಸಾಧನೆ ಮಾಡಿದ್ದರೂ ಜಿಲ್ಲಾಧಿಕಾರಿ ಸಚಿವರ ಗಮನಕ್ಕೂ ತರದೆ ಉತ್ತರ ಪ್ರದೇಶದ ಗಾಝಿಯಾಬಾದ್​ ಮೂಲದ ಎನ್​ಜಿಒ ಕೊಟ್ಟ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಇಂಜಿನಿಯರ್​ಗಳು ಡಿಕೆಶಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ, ಜಿಲ್ಲಾಧಿಕಾರಿ ದೆಹಲಿಗೆ ಭೇಟಿ ನೀಡಿದ್ದು ಜಿಲ್ಲೆಯಲ್ಲಿರಲಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.