ತುಮಕೂರು: ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಕೆಯಾಗುವ ಎಲ್ಲಾ ಪತ್ರವ್ಯವಹಾರ ಆಗಸ್ಟ್ 16 ರಿಂದ ಕಡ್ಡಾಯವಾಗಿ ಇ-ಕಚೇರಿ ಮೂಲಕ ಸಲ್ಲಿಕೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 16 ರಿಂದ ಭೌತಿಕ ಕಡತಗಳ ಸಲ್ಲಿಸಲು ಅವಕಾಶವಿಲ್ಲ ಎಂದರು.
ಇ-ಕಚೇರಿ ಅನುಷ್ಠಾನವಾಗದ ಕಚೇರಿಗಳ ಗುರ್ತಿಸಿ, ಈಗಾಗಲೇ ನೌಕರರಿಗೆ ಅಗತ್ಯ ತರಬೇತಿ ನೀಡಿ ಪೂರಕವಾಗಿ ಇ-ಕಚೇರಿ ಅನುಷ್ಠಾನಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳ ಒದಗಿಸಲಾಗಿದೆ, ಇನ್ನೂ ಕಚೇರಿಗಳಲ್ಲಿ ಗಣಕಯಂತ್ರ, ಮುದ್ರಣ ಯಂತ್ರ, ಮೊದಲಾದ ಪರಿಕರಗಳ ಅವಶ್ಯಕತೆ ಇದ್ದಲ್ಲಿ ಪತ್ರ ಮುಖೇನ ಮನವಿ ಸಲ್ಲಿಸಬೇಕು ಎಂದರು.