ಜಿಲ್ಲೆ

ಕಡೆಗೂ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಗೌರಿಶಂಕರ್ ಎಂಟ್ರೀ; ಸ್ವಾಗತಿಸಲು ಬರದ ಪ್ರಮುಖ ಮುಖಂಡರು

ತುಮಕೂರು: ಜೆಡಿಎಸ್ ತೊರೆದು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಡೆಗೂ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಾರ್ಯಕರ್ತರೊಂದಿಗೆ ಆಗಮಿಸಿದರು.

ಪಕ್ಷಕ್ಕೆ ಸೇರ್ಪಡೆಯಾಗಿದ್ದರೂ ಜಿಲ್ಲೆಯಲ್ಲಿ ಅವರನ್ನು ಪಕ್ಷದ ಕಚೇರಿಗೆ ಆಹ್ವಾನಿಸುವ ಸೌಜನ್ಯವನ್ನು ಜಿಲ್ಲಾಧ್ಯಕ್ಷರಾದಿಯಾಗಿ ಯಾರೂ ಮಾಡಿರಲಿಲ್ಲ, ಬುಧವಾರ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಗೈರು ಹಾಜರಿಯಲ್ಲಿಯೇ ಕಚೇರಿಗೆ ಭೇಟಿ ಇರಿಸು, ಮುರಿಸುವ ಅನುಭವಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಮುಖಂಡರೊAದಿಗೆ ಆಗಮಿಸಿದ ಡಿ.ಸಿ.ಗೌರಿಶಂಕರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಗ್ರಾಮಾಂತರ ಮುಖಂಡರಾದ ಕಲ್ಲಹಳ್ಳಿ ದೇವರಾಜು, ನರಸಿಂಹಮೂರ್ತಿ, ಪಾಲಿಕೆ ಸದಸ್ಯ ಕುಮಾರ್ ಸೇರಿದಂತೆ ಬೆರಳೆಣಿಕೆಯಷ್ಟು ಮುಖಂಡರು ಹಾಜರಿದ್ದು ಸ್ವಾಗತಿಸಿದರು.

ಶಕ್ತಿಯೇ ಇಲ್ಲದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬರೋಬ್ಬರಿ 80000 ಮತಗಳನ್ನು ಪಡೆದಿರುವ ಮಾಜಿ ಶಾಸಕ ಪಕ್ಷಕ್ಕೆ ಬಂದರೂ ಅವರನ್ನು ಪ್ರೀತಿಯಿಂದ ಸ್ವಾಗತಿಸುವ ಸೌಜನ್ಯ ಕಾಂಗ್ರೆಸ್ ಮುಖಂಡರಿಗಿಲ್ಲ ಎಂದು ಗೌರಿಶಂಕರ್ ಅಭಿಮಾನಿಯೊಬ್ಬ ಗೊಣಗಿಕೊಂಡಿದ್ದು ಕೇಳಿಸಿತು.