ತುಮಕೂರು: ಆತಿಥೇಯ ತುಮಕೂರು ತಂಡವು ಬೆಂಗಳೂರು ಗ್ರಾಮಾಂತರ ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಮನಗರ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.
ನಗರದ ವಿವಿ ಆವರಣದಲ್ಲಿ ಗುರುವಾರ ಪುರಷರ ವಿಭಾಗದ ತೀವ್ರ ಹಣಾಹಣಿಯಿಂದ ಕೂಡಿದ್ದ ಕಬಡ್ಡಿ ಸೆಮಿಫೈನಲ್ ಪಂದ್ಯದಲ್ಲಿ ತುಮಕೂರು ತಂಡವು 25-24 ಅಂಕಗಳಿAದ ರಾಮನಗರ ವಿರುದ್ಧ ಜಯಗಳಿಸಿ ಫೈನಲ್ ತಲುಪಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಕೋಲಾರ ತಂಡವು 50-24 ಅಂಕಗಳ ಭಾರೀ ಅಂತರದಿAದ ಬೆಂಗಳೂರು ಗ್ರಾಮಾಂತರ ತಂಡವನ್ನು ಸದೆಬಡಿದು ಪ್ರಶಸ್ತಿ ಸುತ್ತು ತಲುಪಿದೆ.
ಶುಕ್ರವಾರ ಫೈನಲ್‌ನಲ್ಲಿ ಆತಿಥೇಯ ತುಮಕೂರು ತಂಡವು ಕೋಲಾರ ತಂಡವನ್ನು ಎದುರಿಸಲಿದೆ. ವಿಭಾಗೀಯ ಮಟ್ಟದಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಒಟ್ಟು 8 ತಂಡುಗಳು ಭಾಗವಹಿಸಿದ್ದವು. ಮಹಿಳಾ ಕಬಡ್ಡಿ ಪಂದ್ಯಾವಳಿಯು ಶುಕ್ರವಾರ ನಡೆಯಲಿದೆ. ವಿಭಾಗೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಗೆದ್ದ ತಂಡಗಳು ಅ.11 ರಿಂದ 15ರವರೆಗೆ ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲಿವೆ.
ಎಂಜಿ ಸ್ಟೇಡಿಯಂನಲ್ಲಿ ಅಥ್ಲೆಟಿಕ್ಸ್: ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪುರಷರ ವಿಭಾಗದ ಅಥ್ಲೆಟಿಕ್ಸ್ ಸ್ಪರ್ಧೆಗಳು ಗುರುವಾರ ನಡೆದವು. ಶಿವಮೊಗ್ಗದ ಎಂ.ಗೌತಮ್ 100 ಮೀ., ಓಟದಲ್ಲಿ 10.60 ಸೆ. ಓಡಿ ಅತ್ಯಂತ ವೇಗದ ಓಟಗಾರನಾಗಿ ಹೊರಹೊಮ್ಮಿದರು. 4/100 ಮೀ., ಓಟದಲ್ಲು ಶಿವಮೊಗ್ಗ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪ್ರಶಸ್ತಿ ಡಬಲ್ ಸಾಧನೆ ಮಾಡಿದರು.
100 ಮೀ., ಓಟ: 1. ಎಂ.ಗೌತಮ್ (ಶಿವಮೊಗ್ಗ) , 2, ಟಿ.ಮಂಜುನಾಥ್ (ಚಿತ್ರದುರ್ಗ), 3. ಡಿ.ಸುಭಾಷ್ (ಕೋಲಾರ)
200 ಮೀ., ಓಟ: 1. ಎಸ್.ಯು. ಹೇಮಂತಕುಮಾರ್ (ಕೋಲಾರ ),
110 ಮೀ., ಹರ್ಡಲ್ಸ್ : 1. ದಿಶಂತ್ ನಾಯಕ್ (ತುಮಕೂರು), 2. ಎಸ್.ಎಸ್.ಭುವನ್ (ತುಮಕೂರು), 3. ಎಸ್.ಆದರ್ಶ (ಕೋಲಾರ)
400 ಮೀ., : 1.ಆಕಾಶ್ ಎಸ್.ಗೊಲ್ಲಾರ್ (ಶಿವಮೊಗ್ಗ), 2. ಎಂ.ನಿತಿನ್ ಗೌಡ (ಬೆಂಗಳೂರು ಗ್ರಾಮಾಂತರ), 3. ಸಂಜೀವ್ ಆರ್.ಬೋವಿ (ರಾಮನಗರ)
800 ಮೀ., : 1. ಸಚಿತ್ (ತುಮಕೂರು), 2. ಡಿ.ಜಿ.ತೇಜಸ್ (ಶಿವಮೊಗ್ಗ), 3. ಅರುಣಕುಮಾರ್ (ತುಮಕೂರು)
4/100 ಮೀ., ರಿಲೇ : 1. ಎಂ.ಗೌತಮ್, ಡಿ.ವಿ. ಅಭಯ್, ಅಭಿಶೆಟ್ಟಿ, ನಿತೇಶ್ ( ಶಿವಮೊಗ್ಗ) 2. ದಿನೇಶ್ ಬಾಬು, ಡಿ.ಸುಭಾಷ್, ಬಿ.ಧನುಷ್, ಎಸ್.ಶಿವಕುಮಾರ್ (ಕೋಲಾರ )
4/400 ಮೀ., ರಿಲೇ : 1. ಟಿ.ಲೋಹಿಯಾ , ಪಿ.ಪ್ರೀತಂ, ಪಿ.ವಿ.ಸಂದೀಪ್, ಕೆ.ಬಿ.ಸುನಿಲ್ (ಚಿತ್ರದುರ್ಗ), 2. ಯಶವಂತ್, ಭರತ್, ಎಚ್.ವಿ.ಋತ್ವಿಕ್, ಅಶೋಕ್ (ತುಮಕೂರು)
1500 ಮೀ., ಓಟ: 1. ಗುರುಪ್ರಸಾದ್ (ತುಮಕೂರು), 2. ಎಂ.ಎಸ್.ಅಶ್ರಿತ್ (ಶಿವಮೊಗ್ಗ), 3. ವಿ.ಸಿ.ವಿವೇಕ್ (ತುಮಕೂರು)
5000 ಮೀ., ಓಟ: 1. ಎನ್.ಕೆ.ಗುರುಪ್ರಸಾದ್ (ತುಮಕೂರು), 2. ಎಸ್.ಲಕ್ಷö್ಮಣ (ಬೆಂಗಳೂರು ಗ್ರಾಮಾಂತರ), ಎಚ್.ಎನ್.ದರ್ಶನ್ (ತುಮಕೂರು)
10000 ಮೀ., ಓಟ : 1. ಎಸ್.ಲಕ್ಷö್ಮಣ್ (ಬೆಂಗಳೂರು ಗ್ರಾಮಾಂತರ), 2. ವಿ.ನಂದನ್ (ಬೆಂಗಳೂರು ಗ್ರಾಮಾಂತರ), ಎಸ್.ಗೌತಮ್ (ತುಮಕೂರು)