ಜಿಲ್ಲೆ

ದಸರಾ ಕ್ರೀಡಾಕೂಟ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ದಸರಾ ಉತ್ಸವ ಅಂಗವಾಗಿ ಸೆಪ್ಟೆಂಬರ್​ 27 ರಿಂದ ಅಕ್ಟೋಬರ್​ 1ರ ವರೆಗೆ ವಿವಿಧ ಕ್ರೀಡಾಕೂಟ ್ನ ಏರ್ಪಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್​ ಗಂಗಾಧರ್​ ತಿಳಿಸಿದ್ದಾರೆ.

ದಸರಾ ಕ್ರೀಡಾಕೂಟ ಸೆಪ್ಟೆಂಬರ್​ 27ರಂದು ಬೆಳಗ್ಗೆ 8ಕ್ಕೆ ೆ ತುಮಕೂರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಟೆನ್ನಿಸ್​ ಕೋರ್ಟ್​ನಲ್ಲಿ ಟೆನ್ನಿಸ್​, ಸೆಪ್ಟೆಂಬರ್​ 27 ಹಾಗೂ 28ರಂದು ಬೆಳಗ್ಗೆ 9 ಗಂಟೆಗೆ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶೂಟಿಂಗ್​, ಸೆಪ್ಟೆಂಬರ್​ 28ರಂದು ಬೆಳಗ್ಗೆ 7 ಕ್ಕೆ ಜೂನಿಯರ್​ ಕಾಲೇಜು ಮೈದಾನದಲ್ಲಿ ಮ್ಯಾರಥಾನ್​ ಹಾಗೂ ಬೆಳಗ್ಗೆ 9.30 ಗಂಟೆಗೆ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಾಡಕುಸ್ತಿ ಏರ್ಪಡಿಸಲಾಗಿದೆ.

ಸೆಪ್ಟೆಂಬರ್​ 30ರಂದು ಬೆಳಗ್ಗೆ 9 ಗಂಟೆಗೆ ಮಹಾತ್ಮಗಾಂಧಿ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಚೆಸ್​, ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಬ್ಬಡ್ಡಿ ಹಾಗೂ ಬೆಳಗ್ಗೆ 9 ಗಂಟೆಗೆ ಪುಟ್ಟಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜಿಮ್ನಾಸ್ಟಿಕ್ಸ್​, ಅಕ್ಟೋಬರ್​ 1ರಂದು ಬೆಳಗ್ಗೆ 9 ಗಂಟೆಗೆ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಖೋಖೋ ಮತ್ತು ವಾಲಿಬಾಲ್​ ಕ್ರೀಡಾಕೂಟ ಏರ್ಪಡಿಸಲಾಗಿದೆ.