ತುಮಕೂರು: ಈ ಬಾರಿಯ ತುಮಕೂರು ದಸರಾ ಉತ್ಸವದ ವೈಭವಯುತ ಜಂಬೂ ಸವಾರಿಯನ್ನು ಸಹಸ್ರಾರು ಜನ ಕಣ್ತುಂಬಿಕೊಂಡರು. ದಸರಾ ಉತ್ಸವದ ಕೊನೆಯ ದಿನವಾದ ವಿಜಯದಶಮಿದಂದು ಸೀತಕಲ್ಲು ಚಾಮುಂಡೇಶ್ವರಿ ದೇವಿಯ ಜಂಬೂ ಸವಾರಿ ಮೆರವಣಿಗೆ ಸಾಗಿದ ರಾಜಪಥದ ಇಕ್ಕೆಲುಗಳಲ್ಲಿ ಜನ ಜಂಗುಳಿ ಏರ್ಪಟ್ಟಿತ್ತು. ಬೆಳ್ಳಿರಥದಲ್ಲಿ 50ಕ್ಕು ಹೆಚ್ಚು ಗ್ರಾಮದೇವೆತಗಳ ಮೆರವಣಿಗೆಯೊಂದಿಗೆ ಅಂಬಾರಿ ಹೊತ್ತ ದುಬಾರೆ ಆನೆ ಶಿಬಿರದ ಶ್ರೀರಾಮನ ಕಾಣುತ್ತಿದ್ದಂತೆ ಜಯಘೋಷಗಳು ಮುಗಿಲುಮುಟ್ಟಿದವು. ಜಂಬೂ ಸವಾರಿಯು ಸಾಂಸತಿಕ, ಭಕ್ತಿಭಾವದ ಪ್ರತಿಕವಾಗಿತ್ತು.
ಬಿಜಿಎಸ್ ವೃತ್ತದಲ್ಲಿ ಗುರುವಾರ ಮಧ್ಯಾಹ್ನ 12ಕ್ಕೆ ಶುಭ ಧನಸ್ಸು ಲಗ್ನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ, ಪತ್ನಿ ಕನ್ನಿಕಾಪರಮೇಶ್ವರಿ ಜತೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಜಂಬೂಸವಾರಿಗೆ ಚಾಲನೆ ನೀಡಿದರು. ಈ ವೇಳೆ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶಗೌಡ, ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ಆಯುಕ್ತೆ ಬಿ.ವಿ.ಅಶ್ವಿಜ ಸಾಥ್ ನೀಡಿದರು.
ಮೈಸೂರು ದಸರಾ ಆನೆಗಳಂತೆ ಶ್ರೀರಾಮ, ತಿಪಟೂರಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಲಕ್ಷಿ$್ಮ ಹಾಗೂ ನಗರದ ಕರಿಬಸವೇಶ್ವರ ಸ್ವಾಮಿ ಮಠದ ಲಕ್ಷಿ$್ಮ ಆನೆಗಳನ್ನು ಸಿಂಗರಿಸಲಾಗಿತ್ತು. ಭವ್ಯ ಅಲಂಕೃತಗೊಂಡ ಅಂಬಾರಿಯಲ್ಲಿ ಸೀತಕಲ್ಲು ಚಾಮುಂಡೇಶ್ವರಿ ದೇವಿಯನ್ನು ಕೂರಿಸಲಾಗಿತ್ತು. 180 ರಿಂದ 200 ಕೆಜಿ ತೂಕದ ಶ್ರೀರಾಮನ ಎಡ-ಬಲದಲ್ಲಿ ಲಕ್ಷ್ಮೀ ಆನೆಗಳ ಗಜಗಾಂಭೀರ್ಯ ನಡೆಯು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದವು. ಪೊಲೀಸ್ ಅಶ್ವಾರೋಹಿ ದಳ ಮೆರವಣಿಗೆಯನ್ನು ಮುನ್ನಡೆಸಿತು.
ವಿಶೇಷ ವ್ಯವಸ್ಥೆ: ಗಜಪಡೆ ಸಾಗಿದ ರಾಜಮಾರ್ಗದುದ್ದಕ್ಕು ಜನದಟ್ಟಣೆ ಸೇರಿತ್ತು. ಬಿಜಿಎಸ್ ವೃತ್ತದಿಂದ ಅಶೋಕ ರಸ್ತೆ ಮೂಲಕ ಸ್ವಾತಂತ್ರ$್ಯ ಚೌಕ, ಕೋಟೆ ಆಂಜನೇಯ ವೃತ್ತ, ಅಮಾನಿಕೆರೆ ರಸ್ತೆ, ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಹೀಗೆ ಪ್ರಮುಖ ಸ್ಥಳಗಳಲ್ಲಿ ಜಂಬೂ ಸವಾರಿ ವೀಕ್ಷಣೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಂಬೂ ಸವಾರಿ ಕೇವಲ ಧಾರ್ಮಿಕ ಉತ್ಸವವಷ್ಟೇ ಅಲ್ಲದೆ, ನಾಡಿನ ಸಂಸತಿಯ ಪರಂಪರೆಯನ್ನು ಹೊರಹೊಮ್ಮಿಸಿತು. ನಾಡಹಬ್ಬ ಮೈಸೂರು ದಸರಾವನ್ನು ನೆನಪಿಸುವಂತೆ ವಾತಾವರಣ ಸೃಷ್ಟಿಯಾಗಿತ್ತು.
ಚಾಮುಂಡೇಶ್ವರಿ ದೇವಿಯ ಮೆರವಣಿಗೆಯ ಐತಿಹಾಸಿಕ ಘಳಿಗೆಯನ್ನು ರಸ್ತೆಯುದ್ದಕ್ಕು ಸೇರಿದ್ದ ಜನರು ಅದರಲ್ಲು ವಿಶೇಷವಾಗಿ ಯುವಜನತೆ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ನಂದಿಧ್ವಜ, ಸೋಮನಕುಣಿತ, ಚಂಡೆ, ಗೊರವರ ಕುಣಿತ, ಚಕ್ಕೆಭಜನೆ, ತಮಟೆ, ಹಗಲು ವೇಷ, ಹುಲಿ ವೇಷ, ಡೊಳ್ಳು ಕುಣಿತ, ತಾಳ ಮದ್ದಳೆ, ನಾದಸ್ವರ, ಪೂಜಾ ಕುಣಿತ ಹೀಗೆ ನೂರಾರು ಕಲಾ ತಂಡಗಳು ಮೆರವಣಿಗೆಗೆ ಮೆರಗುತಂದವು.