ಜಿಲ್ಲೆ

ಟಾಸ್ಕ್ ಹೆಸರಿನಲ್ಲಿ ವಂಚಿಸುತ್ತಿದ್ದ ಅಂತರರಾಜ್ಯ ಸೈಬರ್ ಆರೋಪಿ ಬಂಧನ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಟಾಸ್ಕ್ ಹೆಸರಿನಲ್ಲಿ ಪ್ರಾಪರ್ಟಿಸ್ ಮೇಲೆ ರಿವ್ಯೂಸ್ ನೀಡಿದಲ್ಲಿ ಹೆಚ್ಚಿನ ಹಣ ಕೊಡುವುದಾಗಿ ಆಮಿಷ ಒಡ್ಡಿ ತಿಪಟೂರಿನ ಅನುಷಾ ಎಂಬುವವರಿಗೆ 20.76ಲಕ್ಷ ರೂ. ವಂಚಿಸಿದ್ದ ಸೈಬರ್ ಆರೋಪಿಯನ್ನು ಸಿಇಎನ್ ಕ್ರೆÊಂ ಪೊಲೀಸರು ಯಶಸ್ವಿಯಾಗಿದ್ದಾರೆ.

2023 ಡಿ.22ರಂದು ಟೆಲಿಗ್ರಾಂ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿ ಎರಡು ದಿನದಲ್ಲಿ ಹಂತಹAತವಾಗಿ ವಿವಿಧ ಖಾತೆಗಳಿಗೆ 20,76,182ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆಂಧ್ರ ಪ್ರದೇಶದ ನೆಲ್ಲೂರಿನ ದಾಸಿನೇನಿ(24), ಸಂತೋಷ(24), ಕಾರವೇಟಿ ನಗರಂ ಮುನೀಂದ್ರ(31) ಹಾಗೂ ತಿರುಪತಿ ಜಿಲ್ಲೆಯ ವಂಕಯಾಲ ಸುರೇಶ್(28) ಬಂಧಿತ ಅರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟಾಪ್, ಮೊಬೈಲ್ ಫೋನ್‌ಗಳು, ಸಿಮ್‌ಕಾರ್ಡ್ ಗಳು, ಪಾಸ್‌ಪುಸ್ತಕಗಳು, ಚೆಕ್ ಪುಸ್ತಕಗಳು, ಬ್ಯಾಂಕ್ ಖಾತೆಯನ್ನು ತೆರೆಯಲು ಬಳಸಿದ್ದ ನಕಲಿ ಸೀಲುಗÀಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳ ಬಂಧನಕ್ಕೆ ಶ್ರಮಿಸಿದ ಸಿಇಎನ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಎಸ್ ನವೀನ, ಪಿಎಸ್‌ಐ ಪ್ರಸನ್ನ ಕುಮಾರ್ ಹಾಗೂ ಸಿಬ್ಬಂದಿಗಳಾದ ಹರೀಶ್, ಮಾರುತೀಶ್, ಸೈಮನ್ ವಿಕ್ಟರ್, ಶಾಂತಕುಮಾರ್, ರಘು, ಇನಾಯತ್ ಉಲ್ಲಾ ಖಾನ್, ದ್ವಾರಕೀಶ್, ಚಿಕ್ಕಣ್ಣ ಹಾಗೂ ಚಾಲಕರಾದ ಅಲ್ತಾಫ್, ರಘು ಅವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.