ಜಿಲ್ಲೆ

ಅಪರಿಚಿತ ಮಹಿಳೆ ಶವ ಪತ್ತೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕ್ಯಾತಸಂದ್ರ ಪೋಲೀಸ್​ ಠಾಣೆ ವ್ಯಾಪ್ತಿ ಸಿದ್ದಗಂಗಾ ಮಠದ ಬಸವೇಶ್ವರ ಪ್ರತಿಮೆ ಬಳಿ ಸುಮಾರು 45 ವರ್ಷದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.

ಮೃತ ಮಹಿಳೆಯು 160 ಸೆಂಮೀ. ಎತ್ತರ, ಕೋಲು ಮುಖ, ಗಿಡ್ಡನೆಯ ಮೂಗು, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಗೈ ಮೊಣಕೈನಲ್ಲಿ ಗಂಗಮ್ಮ ಎಂದು ಹಚ್ಚೆ, ಮೈಮೇಲೆ ಬಿಳಿ-ಕೆಂಪು ಬಣ್ಣದ ಸೀರೆ ಧರಿಸಿದ್ದಾರೆ.

ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ಕ್ಯಾತಸಂದ್ರ ಪೋಲೀಸ್​ ಠಾಣೆ ಸಂಪರ್ಕಿಸಿ.