ತುಮಕೂರು: ಸೂರಿಲ್ಲದ ಜನರನ್ನು ಗುರುತಿಸಿ, ಅವರಿಗೆ ವಸತಿ ಒದಗಿಸುವುದು ಪ್ರತಿಯೊಂದು ನಾಗರಿಕ ಸರ್ಕಾರದ ಕರ್ತವ್ಯವಾಗಿದೆ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತೀ ಸುಂದರೇಶ್ ಅಭಿಪ್ರಾಯಪಟ್ಟರು.
ನಗರದ ಬಿಜಿಎಸ್ ವೃತ್ತದಲ್ಲಿ `ಸೂರಿಗಾಗಿ ಕೋಟಿ ಹೆಜ್ಜೆ' ಸಿಪಿಐ ಹಮ್ಮಿಕೊಂಡಿರುವ ಪಾದಯಾತ್ರೆ ತುಮಕೂರಿಗೆ ಆಗಮಿಸಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕರೊನಾಗೂ ಮುನ್ನ ಶಿರಾ ತಾಲೂಕು ತಾಳಗುಂದದಿAದ ಆರಂಭವಾಗಿದ್ದ ಸೂರಿಗಾಗಿ ಕೋಟಿ ಹೆಜ್ಜೆ ಪಾದಯಾತ್ರೆ ಸುಮಾರು 49 ದಿನಗಳ ನಂತರ ಸರಕಾರ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಕಳೆದ ಆರು ದಿನಗಳ ಹಿಂದೆ ಪುನಃ ಪಾದಯಾತ್ರೆ ಆರಂಭಗೊAಡಿದ್ದು, ಮಾ.9 ರಂದು ಬೆಂಗಳೂರು ತಲುಪಲಿದ್ದು,ಅಂದು ಸ್ವಾತಂತ್ರ ಉದ್ಯಾನವ ನದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಸಿ.ಯತಿರಾಜು ಮಾತನಾಡಿ, ಇಡೀ ಜಗತ್ತಿನ ಶೇ2.08ರಷ್ಟು ಭೂಮಿಯನ್ನು ಭಾರತ ಹೊಂದಿದೆ.ಆದರೆ ಜನಸಂಖ್ಯೆಯಲ್ಲಿ ಶೇ17ರಷ್ಟು ಭಾರತದಲ್ಲಿದೆ.ಹಾಗಾಗಿ ದೇಶದಲ್ಲಿ ಸಮಗ್ರ ಭೂ ನೀತಿ ಜಾರಿಗೆ ಬರಬೇಕಿದೆ. ಕೃಷಿ ಮತ್ತು ನಿವೇಶನಕ್ಕೆ ಮೊದಲ ಅದ್ಯತೆ ನೀಡಬೇಕಾಗಿದೆ ಎಂದರು.
ಸಿಪಿಐಎA ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯಂ ಮಾತನಾಡಿ,ಸೂರಿಗಾಗಿ ಕೋಟಿ ಹೆಜ್ಜೆ ಹೋರಾಟದ ಜೊತೆ ಜೊತೆಗೆ, ಈ ಬಾರಿಯ ಚುನಾವಣೆಯಲ್ಲಿ ನಮಗೆ ಸೂರು, ಭೂಮಿ ನಿರಾಕರಿಸಿದವರಿಗೆ ಮತ ನೀಡುವುದಿಲ್ಲ ಎಂಬ ಸ್ಪಷ್ಟ ರಾಜಕೀಯ ಸಂದೇಶವನ್ನು ನಾವೆಲ್ಲರೂ ನೀಡಬೇಕೆಂದು ಕರೆ ನೀಡಿದರು.
ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ.ಸಿ.ಡೋAಗ್ರೆ, ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ಎಸ್.ಎನ್.ಸ್ವಾಮಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಜಿಲ್ಲಾ ಸಹಕಾರ್ಯದರ್ಶಿ ಜಿ.ಚಂದ್ರಶೇಖರ್, ಜಿಲ್ಲಾ ಖಜಾಂಚಿ ಅಶ್ವಥನಾರಾಯಣ್ ಇದ್ದರು.