ಜಿಲ್ಲೆ

ಮಧುಗಿರಿಯಲ್ಲಿಯೂ ಮತ್ತೆ ಕಾಣಿಸಿಕೊಂಡ ಕರೊನಾ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ದೇಶದೆಲ್ಲೆಡೆ ಮಹಾಮಾರಿ ಕರೊನಾ ಮತ್ತೆ ವಕ್ಕರಿಸಿರುವ ಸುದ್ದಿ ಹರಡಿರುವ ಬೆನ್ನಹಿಂದೆಯೇ ತುಮಕೂರಿನಲ್ಲಿಯೂ ಮೊದಲ ಕರೊನಾ ಪಾಸಿಟವ್ ಪ್ರಕರಣ ಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.

ಮಧುಗಿರಿ ಮೂಲದ ವ್ಯಕ್ತಿಗೆ ಕರೊನಾ ದೃಢವಾಗಿದ್ದು ಅವರ ಕುಟುಂಬದ ಎಲ್ಲಾ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಿ ನಿಗಾವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಹೃದಯರೋಗ ಸಂಬAಧ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿ ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ಪ್ರಕರಣ ಪತ್ತೆಯಾಗಿದೆ. ಕೂಡಲೇ ಜಯದೇವ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.