ತುಮಕೂರು: ಜಿಲ್ಲೆಯ 21 ಕೇಂದ್ರಗಳಲ್ಲಿ ಉಂಟೆ ಕೊಬ್ಬರಿಗೆ ನೋಂದಣಿ ಆರಂಭವಾಗಿದ್ದು ರೈತರು ನೇರವಾಗಿ ಭೇಟಿ ನೀಡಿ ಕೊಬ್ಬರಿ ಮಾರಾಟ ಮಾಡಲು ಅವಕಾಶವಿದೆ.
ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ 12000 ಹಾಗೂ ರಾಜ್ಯ ಸರ್ಕಾರದ 1500ರೂ. ಪ್ರೋತ್ಸಾಹಧನ ಸೇರಿ ಒಟ್ಟು 13500ರೂ. ರೈತರಿಗೆ ಲಭ್ಯವಾಗಲಿದ್ದು ಮಧ್ಯವರ್ತಿಗಳ ಮೂಲಕ ಮಾರಾಟಕ್ಕೆ ಅವಕಾಶವಿಲ್ಲದಂತಾಗಿದೆ.
ಮಾರಾಟ ಹಾಗೂ ಖರೀದಿಗೆ ರೈತರ ಬಯೋಮೆಟ್ರಿಕ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ನೋಂದಣಿ ಹಾಗೂ ಮಾರಾಟದ ಸಂದರ್ಭದಲ್ಲಿ ರೈತರು ಖುದ್ದಾಗಿ ಹಾಜರಾಗಬೇಕಿದೆ.
ಲ್ಲೆಯೆಲ್ಲೆಡೆ ನೋಂದಣಿಯ ವಿಷಯ ತಿಳಿದ ರೈತರು ಏಕಕಾಲದಲ್ಲಿ ನೋಂದಣಿಗೆ ಮುಗಿಬಿದ್ದಿದ್ದು ಸರತಿಯಲ್ಲಿ ನಿಲ್ಲುವಂತಾಗಿದೆ. ಖರೀದಿ ಕೇಂದ್ರದಲ್ಲಿ ರೈತರಿಗೆ ಕುಡಿಯಲು ನೀರು ಕೂಡ ಇಲ್ಲದಂತಾಗಿದ್ದು ಮೂಲಸೌಕರ್ಯ ಒದಗಿಸಬೇಕಿದೆ.