ತುಮಕೂರು: ಚುನಾವಣೆ ಮಾಡದೆ ತನ್ನ ಆಡಳಿತ ಮಂಡಳಿ ರಚನೆ ಮಾಡಿಕೊಳ್ಳುವ ವಿಎಸ್‌ಎಸ್‌ಎನ್‌ಗಳಿಗೆ ಡಿಸಿಸಿ ಬ್ಯಾಂಕ್‌ನಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಘೋಷಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ದೊಡ್ಡಎಣ್ಣೇಗೆರೆ ಕೃಷಿ ಪತ್ತಿನ ಸಹಕಾರ ಸಂಘ ನಿರ್ಮಿಸಿರುವ ಗೋದಾಮು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಹೆಸರಿನಲ್ಲಿ ಸಂಘಗಳು ಅನಗತ್ಯ ಹಣ ಖರ್ಚು ಮಾಡುವುದನ್ನು ತಪ್ಪಿಸಬೇಕಿದೆ ಎಂದರು.
5 ವರ್ಷ ಉಳಿಸಿ ಕೂಡಿಟ್ಟಿದ್ದ ಹಣವನ್ನು ಪ್ರಿಟಿಂಗ್, ಪೊಲೀಸ್, ಊಟ, ಆಫೀಸರ್ ಹೀಗೆ ಏನೇನೋ ಲೆಕ್ಕ ಕೊಟ್ಟು ಖಾಲಿ ಮಾಡಿ, ಸಾಲ ತೋರಿಸುತ್ತಾರೆ. ಅನಗತ್ಯವಾಗಿ ಚುನಾವಣೆ ನಡೆದು ಸಂಸ್ಥೆಗೆ ಹೆಚ್ಚು ಆರ್ಥಿಕ ನಷ್ಟವಾಗುವುದನ್ನು ತಪ್ಪಿಸಲು ಉಡುಗೊರೆ ಎಂದರು.