ಜಿಲ್ಲೆ

ಚಿಕ್ಕನಾಯಕನಹಳ್ಳಿ, ಕೊರಟಗೆರೆಗೆ ತಹಸೀಲ್ದಾರ್ ನೇಮಕ

ತುಮಕೂರು: ನಾಲ್ಕು ತಿಂಗಳಲ್ಲಿ ನಾಲ್ಕು ತಹಸೀಲ್ದಾರ್‌ಗಳನ್ನು ಕಂಡು, ಆಡಳಿತ ಹಳಿತಪ್ಪಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಮತ್ತೊಬ್ಬರು ತಹಸೀಲ್ದಾರ್ ನೇಮವಾಗಿದ್ದಾರೆ.

ಕಂದಾಯ ಇಲಾಖೆ ಸೋಮವಾರ ಖಾಲಿ ಇರುವ ಹುದ್ದೆಗಳಿಗೆ ತಹಸೀಲ್ದಾರ್‌ಗಳನ್ನು ನೇಮಿಸಿದ್ದು ಚಿಕ್ಕನಾಯಕನಹಳ್ಳಿಗೆ ಸಿ.ಜಿ.ಗೀತಾ, ಕೊರಟಗೆರೆಗೆ ಕೆ.ಮಂಜುನಾಥ್ ಅವರನ್ನು ನೇಮಿಸಿ ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಜಿ.ಮುಕಾರ್‌ಪಾಷ ಅಧಿಸೂಚನೆ ಹೊರಡಿಸಿದ್ದಾರೆ.