ಜಿಲ್ಲೆ

ಶೆಟ್ಟಿಕೆರೆ ಸರ್ಕಲ್‌ನಲ್ಲಿ ನಿಯಂತ್ರಣ ಕಳೆದಕೊಂಡ ಟಿಪ್ಪರ್‌ಗೆ ಸಿಲುಕಿ ಯುವಕ ಸಾವು

ತುಮಕೂರು: ಚಿಕ್ಕನಾಯಕನಹಳ್ಳಿ ಪಟ್ಟಣದ ಶೆಟ್ಟಿಕೆರೆ ವೃತ್ತದಲ್ಲಿ ವೇಗವಾಗಿ ಬಂದ ಟಿಪ್ಪರ್ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಯುವಕನಿಗೆ ಡಿಕ್ಕಿಯಾಗಿದ್ದು, ಚಕ್ರದಡಿ ಸಿಲುಕಿದ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸೋಮವಾರ ರಾತ್ರಿ ಶೆಟ್ಟಿಕೆರೆ ಸರ್ಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 30 ವರ್ಷದ ಮೃತ ಯುವಕನ ಗುರುತು ಪತ್ತೆಯಾಗಿಲ್ಲ, ಸ್ಥಳದಲ್ಲಿ ಬ್ಯಾಡಿಕೇಡ್ ಹಾಕಿ ರಸ್ತೆಯಲ್ಲಿ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.