ಜಿಲ್ಲೆ

ಬೆಂಗಳೂರಿನ ರೇಸ್‌ಕೋರ್ಸ್ ಕುಣಿಗಲ್‌ಗೆ ಶಿಫ್ಟ್, ಕೊಬ್ಬರಿಗೆ 1500ರೂ. ಪ್ರೋತ್ಸಾಹಧನ: ಸಿಎಂ ಸಿದ್ದರಾಮಯ್ಯ

ತುಮಕೂರು: ಬೆಂಗಳೂರಿನಲ್ಲಿರುವ ರೇಸ್‌ಕೋರ್ಸ್ ಕುಣಿಗಲ್‌ಗೆ ವರ್ಗಾಹಿಸಲು ಸಲಹೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಖಚಿತಪಡಿಸಿದರು.

ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಣಿಗಲ್‌ನಲ್ಲಿರುವ ಕುದುವೆ ಫಾರ್ಮ್ ಜಾಗದಲ್ಲಿ ರೇಸ್‌ಕೋರ್ಸ್ ಆರಂಭಿಸುವುದರಿಂದ ಬೆಂಗಳೂರಿನಲ್ಲಿ ಒತ್ತಡ ಕಡಿಮೆ ಮಾಡಬಹುದು ಎಂದರು.

ಕೊಬಬರಿ ಬೆಳೆಗಾರರಿಗೆ ಭರವಸೆ ನೀಡಿದಂತೆ 1500ರೂ. ಪ್ರೋತ್ಸಾಹಧನ ಈಗಾಗಲೇ ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರ 1500ರೂ. ನೀಡಲಿದೆ ಎಂದು ಖಚಿತಪಡಿಸಿದರು.