ಜಿಲ್ಲೆ

ಜ್ಞಾನಯಜ್ಞ

ತುಮಕೂರು:ಚಿನ್ಮಯ ಮಿಷನ್​ ವತಿಯಿಂದ ನಗರದ ಸಿದ್ಧಗಂಗಾ ಬಡಾವಣೆಯಲ್ಲಿರುವ ಚಿನ್ಮಯ ಗೀತ ಮಂದಿರದಲ್ಲಿ ಮೈಸೂರು ಕೇಂದ್ರದ ಪ್ರಮುಖರಾದ ಸ್ವಾಮಿನಿ ಕಾಶಿಕಾನಂದ ರವರಿಂದ ಫೆ.16ರಿಂದ 22ರ ವರೆಗೂ ಪ್ರತಿದಿನ ಸಂಜೆ 6.30ರಿಂದ 8ರ ವರೆಗೂ ಕುಲಶೇಖರ ಆಳ್ವಾರ್​ ವಿರಚಿತ ಮುಕುಂದ ಮಾಲಾ ಹಾಗೂ 11.30ರಿಂದ ಮಧ್ಯಾಹ್ನ 12.30ರ ವರೆಗೂ ತುಳಸಿದಾಸರ ರಾಮಚರಿತ ಮಾನಸ ಆಧಾರಿತ "ಮಾನಸ ಮುತ್ತುಗಳು' ವಿಷಯ ಕುರಿತು "ಜ್ಞಾನಯಜ್ಞ' ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.