ಜಿಲ್ಲೆ

ಚೇಳೂರು ಯುವಕನೊಂದಿಗೆ ಮನಬಿಚ್ಚಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ; ನೆರೆದಿದ್ದವರು ಪುಳಕಿತ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಮುದ್ರಾ ಯೋಜನೆ ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರಮೋದಿ ಆನ್‌ಲೈನ್ ಮೂಲಕ ಉತ್ಸಾಹದಿಂದ ಸಂವಾದ ನಡೆಸಿದರು.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಚೇಳೂರು ಗ್ರಾಮದಿಂದ ಶನಿವಾರ ಜನಸಂಕಲ್ಪ ವಿಕಸಿತ ಭಾರತ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದದ ಲೈವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮುದ್ರಾ ಯೋಜನೆಯಲ್ಲಿ ಬ್ಯಾಂಕ್‌ನಿAದ 4.50 ಲಕ್ಷ ರೂ. ಸಾಲ ಪಡೆದಿರುವ ಚೇಳೂರಿನ ಮುಕೇಶ್ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದು ನೆರೆದಿದ್ದ ನೂರಾರು ಫಲಾನುಭವಿಗಳಲ್ಲಿ ಪುಳಕಿತಗೊಳಿಸಿತು.

ಮುದ್ರಾ ಯೋಜನೆಯಿಂದ ನಿಮಗೆ ಏನು ಅನುಕೂಲವಾಗಿದೆ ಎಂಬ ಪ್ರಧಾನಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಕೇಶ್, ಮುದ್ರಾ ಯೋಜನೆಯಿಂದ ಸಹಾಯ ಪಡೆದು ನಾವು ಸಣ್ಣ ಉದ್ಯಮ ಆರಂಭಿಸಿ, ಮತ್ತೊಬ್ಬರಿಗೂ ಸಹಾಯ ಮಾಡಲು ಅನುಕೂಲವಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಸಂಸದ ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದ್ದರು. ಕಾರ್ಯಕ್ರಮದ ದೆಹಲಿ ಪ್ರತಿನಿಧಿ, ಐಎಎಸ್ ಅಧಿಕಾರಿ ಅಗರವಾಲ್ ಮಾತನಾಡಿ, ಕೇಂದ್ರ ಸರ್ಕಾರವು ಹಲವು ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹರು ಸದ್ಬಳಸಿಕೊಳ್ಳಬೇಕು ಎಂದರು.

ಪ್ರಧಾನಮಂತ್ರಿ ಮುದ್ರಾ ಯೋಜನೆ, ಸುಕನ್ಯಾ ಸಮೃದ್ಧಿ, ಜನ್‌ಧನ್, ಸುರಕ್ಷಾಭೀಮಾ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನೆ, ಅಟಲ್ ಪಿಂಚಣಿ, ಪ್ರಧಾನಮಂತ್ರಿ ಉಜ್ವಲ ಗ್ಯಾಸ್, ಜನ ಔಷಧ, ಆಯುಷ್ಮಾನ್ ಭಾರತ್, ರೈತರ ಕಲ್ಯಾಣ, ಆಹಾರ ಭದ್ರತೆ, ಆತ್ಮ ನಿರ್ಭರ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳು ಪ್ರಧಾನಿ ಅವರಿಗೆ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ರಂಗಮ್ಮ, ಶಾಸಕ ಬಿ.ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ನವೀನ್‌ಕುಮಾರ್, ಎಲ್ಪಿಜಿ ಸೀನಿಯರ್ ಏರಿಯಾ ಮ್ಯಾನೇಜರ್ ಹರಿಕೃಷ್ಣನ್ ಮತ್ತಿತರರು ಇದ್ದರು.