ಪಾವಗಡ: ಪಟ್ಟಣದ ತುಮಕೂರು ರಸ್ತೆಯ ಹೊರವಲಯದ ಕಣಿವೆನಹಳ್ಳಿ ಶ್ರೀ ಸಾಯಿ ಲಲಿತ ವೃದ್ದಾಶ್ರಮದ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಮೃತಪಟ್ಟು ಮತ್ತೊಬ್ಬನಿಗೆ ಗಂಬೀರ ಗಾಯವಾಗಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಆರ್.ಅನಂತಪುರ ಗ್ರಾಮದ ನಿವಾಸಿ ಗೋಪಾಲಪ್ಪ(50 )ಮೃತ ದುರ್ದೈವಿಯಾಗಿದ್ದಾರೆ. ಅದೇ ಗ್ರಾಮದ ನರಸಿಂಹಮೂರ್ತಿ(46)ಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನರಸಿಂಹಮೂರ್ತಿಯವರ ಮಗ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ವಾಸವಿದ್ದ ತಮ್ಮ ಮಗನನ್ನು ನೋಡಿಕೊಂಡು ಕಡಪಲಕೆರೆಯಿಂದ ಆಂದ್ರದ ಮಡಕಶಿರಾಗೆ ಹೋಗುವ ವೇಳೆ ರಸ್ತೆ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಪಾವಗಡ ಪಟ್ಟಣದ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುರೇಶ್ ಮತ್ತು ಸಿಬ್ಬಂದಿ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.