ಜಿಲ್ಲೆ

ಬಸ್, ಒಮಿನಿ ಮುಖಾಮುಖಿಯಲ್ಲಿ ಇಬ್ಬರು ಸಾವು; 10 ಜನರ ಗಾಯ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನಗರದ ಮರಳೂರು ಕೆರೆ ಏರಿಯ ಮೇಲೆ ಖಾಸಗಿ ಬಸ್ ಹಾಗೂ ಓಮಿನಿ ಕಾರು ಮುಖಾಮುಖಿಯಾಗಿ ಸಂಭವಿಸಿರುವ ಭೀಕರ ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಮೃತರಾಗಿದ್ದು, 10 ಜನರು ಗಾಯಗೊಂಡಿದ್ದಾರೆ.

ಗುರುವಾರ ಸಂಜೆ ಗಾರ್ಮೆಂಟ್ಸ್ ಕೆಲಸ ಮುಗಿಸಿಕೊಂಡು ತುಮಕೂರಿನಿಂದ ಗೂಳೂರು ಕಡೆ ತೆರಳುತ್ತಿದ್ದ ತುಮಕೂರು ತಾಲೂಕು ಮಾನಂಗಿಯ ಸುರೇಶ್(40) ಹಾಗೂ ಸುಮಾ(30) ಮೃತ ದುರ್ದೈವಿಗಳು.

ಕುಣಿಗಲ್ ಕಡೆಯಿಂದ ವೇಗವಾಗಿ ಬಂದ ಬಸ್ ಡಿಕ್ಕಿಯಾದ ರಭಸಕ್ಕೆ ಓಮಿನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಇಬ್ಬರೂ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.