ಜಿಲ್ಲೆ

ಬುದ್ಧ ಪೂರ್ಣಿಮಾ; ಮಾಂಸ ಮಾರಾಟ ನಿಷೇಧ

ತುಮಕೂರು: ಬುದ್ಧ ಪೂರ್ಣಿಮಾ ಹಬ್ಬದ ಪ್ರಯುಕ್ತ ಮೇ.22ರ ಸಂಜೆ 5ರಿಂದ ಮೇ.23ರ ಮಧ್ಯರಾತ್ರಿ 12ರ ವರೆಗೆ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆ ಮುಚ್ಚಲು ಹಾಗೂ ಮಾಂಸ ಮಾರಾಟ ಮಾಡುವುದಾಗಲಿ ಸಂಗ್ರಹಣೆ ಮಾಡುವುದಾಗಲಿ ನಿಷೇಧಿಸಿದೆ.


ಈ ಅವಧಿಯಲ್ಲಿ ಕಸಾಯಿ ಖಾನೆ ತೆರೆಯಕೂಡದು ಹಾಗೂ ಮಾಂಸ ಮಾರಾಟ ಮಾಡಕೂಡದು. ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.