ತುಮಕೂರು: ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್, ಬುದ್ಧ ಧಮ್ಮ ಪ್ರತಿಷ್ಠಾನ ಹಾಗೂ ಧಮ್ಮ ಲೋಕ ಬುದ್ಧ ವಿಹಾರದ ಸಹಯೋಗದಲ್ಲಿ
ಮೇ.12ರಂದು ಮಧ್ಯಾಹ್ನ 3ಕ್ಕೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ "ಭಗವಾನ್ ಬುದ್ಧ ಜಯಂತಿ' ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 2ಕ್ಕೆ ಮಹಾನಗರಪಾಲಿಕೆ ಆವರಣದಿಂದ ಅಶೋಕರಸ್ತೆ ಮೂಲಕ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ಭಗವಾನ್ ಬುದ್ಧರ ಭಾವಚಿತ್ರದ ಮೆರವಣಿಗೆ ಏರ್ಪಡಿಸಲಾಗಿದೆ.