ತುಮಕೂರು: ಜಿಲ್ಲೆಗೆ ಬರ ಅಧ್ಯಯನಕ್ಕೆ ಆಗಮಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೈಗಾರಿಕೋದ್ಯಮಿಗಳ ಜತೆ ತುಮಕೂರಿನಲ್ಲಿ ಸಂವಾದ ನಡೆಸಿದರು.
ಕಾವೇರಿ ನೀರು ಬೆಂಗಳೂರು ಕೊಡಲಿಕ್ಕೆ ಆಗ್ತಿಲ್ಲ, ಈ ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೆ ಗಾಳಿನೂ ಬೀಸುತ್ತಿಲ್ಲ, ಮಳೆನೂ ಬಂದಿಲ್ಲ. ಕಲಾವಿದರಿಗೆ ಕೊಟ್ಟಿರುವ ಚೆಕ್‌ಬೌನ್ಸ್, ಶವಸಂಸ್ಕಾರಕ್ಕೆ ಕೊಟ್ಟ ಚೆಕ್‌ಬೌನ್ಸ್ ರಾಜ್ಯ ಆರ್ಥಿಕವಾಗಿ ದಿವಾಳಿ ಆಗಿಬಿಟ್ಟಿದೆ ಎಂದು ಹರಿಹಾಯ್ದರು.
ಜನರಿಗೆ ಮಕಮ್ಮಲ್ ಟೋಪಿ ಹಾಕಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ತೀವ್ರ ಬರ ಬಂದಿದೆ. ಕೈಗಾರಿಕೆಗಳಿಗೆ ಬರದ ಬಿಸಿ ತಟ್ಟಿದೆ. 3 ಗಂಟೆ ಕೂಡ ರೈತರಿಗೆ ತ್ರೀಫೇಸ್ ಕೊಡುತ್ತಿಲ್ಲ ಎಂದು ಶಾಸಕ ಬಿ.ಸುರೇಶ್‌ಗೌಡಗುಡುಗಿದರು.
ಸಂಸದ ಜಿ.ಎಸ್.ಬಸವರಾಜು, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಬಿ.ಸುರೇಶ್‌ಗೌಡ, ಮಾಜಿ ಸಚಿವ ಬಿ.ಸಿ.ನಾಗೇಶ್ ಮತ್ತಿತರರು ಇದ್ದರು.
ಸಂವಾದದ ಬಳಿಕ ಬರ ವೀಕ್ಷಣೆಗೆ ತೆರಳಲಿರುವ ಬಿಎಸ್‌ವೈ, ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿ, ಗುಬ್ಬಿ ತಾಲೂಕಿನ ಚೇಳೂರು, ಶಿರಾ ತಾಲೂಕಿನ ಓಜನಕುಂಟೆಯಲ್ಲಿ ಬರ ಅಧ್ಯಯನ ನಡೆಸಲಿದ್ದಾರೆ.