ತುಮಕೂರು: ಕ್ರೀಡಾಕೂಟ ನೋಡಲು ಹೋಗಿದ್ದ ವಿದ್ಯಾರ್ಥಿ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಕೆರೆ ಅಂಗಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಹುಳಿಯಾರಿನ ಕನಕದಾಸ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಗೋಪಾಲಪುರದ ಹೇಮಂತ್‌ಕುಮಾರ(15) ಮೃತ ಬಾಲಕ, ಆ.24ರಂದು ಹುಳಿಯಾರು-ಕೆಂಕೆರೆ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ನಡೆಯುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಹೋದ ನಂತರ ಕಾಣೆಯಾಗಿದ್ದನು.
ಹುಳಿಯಾರು ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ. ಮೃತ ದೇಹವನ್ನು ಶವಪರೀಕ್ಷಗೆ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.