ತುಮಕೂರು: ಕೇಂದ್ರ ಸರ್ಕಾರದ ರೈಲ್ವೆ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ತುಮಕೂರಿನಲ್ಲಿ ಸರ್ವಪಕ್ಷದ ಸದಸ್ಯರೆಂದೇ ಗುರುತಿಸಿಕೊಂಡಿರುವ ಮೂವರನ್ನು ಆಯ್ಕೆ ಮಾಡಿಕೊಂಡಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರ ನಿರ್ಧಾರ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ, ಹಿಂಬಾಲಕರನ್ನು ನೇಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೋಮಣ್ಣ ಹಾಗೂ ಜಿಲ್ಲಾ ಬಿಜೆಪಿ ನಡುವಿನ ಅಂತರ ಹೆಚ್ಚಿಸಿದೆ.
ತುಮಕೂರು ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿರುವ ವಿ.ಸೋಮಣ್ಣ ಕಾರ್ಯಕರ್ತರಿಗೆ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ದೂರಿದೆ, ಕೆಲವೇ ಜನರನ್ನು ಸಲಹೆಗಾರರಾಗಿ ಇಟ್ಟುಕೊಂಡು ಚುನಾವನೆಯಲ್ಲಿ ದುಡಿದ ಬಹುತೇಕ ಮುಖಂಡರನ್ನು ದೂರವಿಟ್ಟಿದ್ದಾರೆ ಎನ್ನಲಾಗಿದೆ.