ಜಿಲ್ಲೆ

ವಿಜಯೇಂದ್ರ ಟೀಂ ಗೆ ಓಂಕಾರ್; ಎಸ್‌ಸಿ ಮೋರ್ಚಾಗೆ ನೇಮಕ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಭಾರತ ಜನತಾ ಪಕ್ಷದ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ತುಮಕೂರಿನ ಓಂಕಾರ್ ನೇಮಕವಾಗಿದ್ದು ಯುವ ಕೋಟಾದಲ್ಲಿ ಬಿ.ವೈ.ವಿಜಯೇಂದ್ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಎಬಿವಿಪಿ ಹಿನ್ನೆಲೆಯ ಓಂಕಾರ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಭೋವಿ ಸಂಘದ ಜಿಲ್ಲಾಧ್ಯಕ್ಷರಾಗಿಯೂ ಓಂಕಾರ್ ಕೆಲಸ ಮಾಡುತ್ತಿದ್ದಾರೆ.